ತರೀಕೆರೆ: ಪಟ್ಟಣದ ಮಮತಾ ಮಹಿಳಾ ಸಮಾಜದ ವತಿಯಿಂದ ಅಂಚೆ ಇಲಾಖೆಯಲ್ಲಿ ಮಹಿಳೆಯರಿಗೆ ದೊರೆಯುವ ವಿವಿಧ ಯೋಜನೆಗಳನ್ನೊಳಗೊಂಡ ಮಹಿಳಾ ಸಮ್ಮಾನ್ ಖಾತೆಗಳನ್ನು ತೆರೆಯಲಾಯಿತು.
ಅಂಚೆ ಇಲಾಖೆಯಲ್ಲಿ ದೊರೆಯುವ ಉಳಿತಾಯ ಖಾತೆ, ಜೀವ ವಿಮೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್, ಅಪಘಾತ ವಿಮಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಪಿ.ಪಿ.ಎಫ್.ನ ಕುರಿತು ಅಂಚೆ ಸಹಾಯಕ ಕೆ.ಆರ್. ಕುಮಾರ್ ಮಾಹಿತಿ ನೀಡಿ, ಖಾತೆಗಳನ್ನು ತೆರೆದರು.
ಈ ಸಂದರ್ಭದಲ್ಲಿ ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.