ADVERTISEMENT

ತರೀಕೆರೆ ಪುರಸಭೆ ಚುನಾವಣೆ: 23 ವಾರ್ಡ್‌ಗಳಲ್ಲಿ ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:08 IST
Last Updated 3 ಸೆಪ್ಟೆಂಬರ್ 2021, 4:08 IST
ಮತದಾನಕ್ಕೆ ಆಗಮಿಸಿದ ತರೀಕೆರೆ ಮಂದಿ
ಮತದಾನಕ್ಕೆ ಆಗಮಿಸಿದ ತರೀಕೆರೆ ಮಂದಿ   

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಪುರಸಭೆ ಸದಸ್ಯರ ಆಯ್ಕೆಗೆ ಮತದಾನ ಆರಂಭವಾಗಿದೆ.

ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮತದಾರರು ಮತಗಟ್ಟೆಗಳ ಬಳಿ ಸಾಲುಗಟ್ಟಿ ನಿಂತಿದ್ದಾರೆ. 27 ಮತಗಟ್ಟೆ ಸ್ಥಾಪಿಸಲಾಗಿದೆ. ಐದು ಸೂಕ್ಷ್ಮ ಮತಗಟ್ಟೆಗಳು ಇವೆ.

ಒಟ್ಟು 23 ವಾರ್ಡ್ ಗಳಿದ್ದು, ಈ ಪೈಕಿ ಒಂದು ವಾರ್ಡ್ ನಲ್ಲಿ (10) ಅವಿರೋಧವಾಗಿ ಆಯ್ಕೆ ನಡೆದಿದೆ. ಬಾಕಿ 22 ವಾರ್ಡ್ ಗಳಿಗೆ ಸದಸ್ಯರ
ಆಯ್ಕೆಗೆ ಮತದಾನ ನಡೆಯುತ್ತಿದೆ. 78 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಒಟ್ಟು 28073 ಮತದಾರರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.