ತರೀಕೆರೆ (ಚಿಕ್ಕಮಗಳೂರು): ಕಲ್ಲತ್ತಿಗಿರಿ ಸಮೀಪದ ಕೊಂಡೆಕಾನ್ ಹಳ್ಳದ ಬಳಿ ತಮ್ಮ ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲುಜಾರಿ 80 ಅಡಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಎನ್.ಟಿ. ಸಂತೋಷ್ (38) ಮೃತಪಟ್ಟವರು. ತರೀಕೆರೆ ತಾಲ್ಲೂಕಿನ ಲಕ್ಷ್ಮೀಸಾಗರದ ಬಸವೇಶ‍್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ಪಟ್ಟಣದ ಕೋಟೆ ಕ್ಯಾಂಪ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಸಂತೋಷ್ ತಮ್ಮ ಪತ್ನಿಯೊಂದಿಗೆ ಬೈಕ್‍ನಲ್ಲಿ ಶನಿವಾರ ಕಲ್ಲತ್ತಿಗಿರಿ ಮತ್ತು ಕೆಮ್ಮಣ್ಣುಗುಂಡಿ ಪ್ರವಾಸಕ್ಕೆ ತೆರಳಿದ್ದರು. ಮಾರ್ಗಮಧ್ಯ ಪೊಟೊ ತೆಗೆದುಕೊಳ್ಳಲು ನಿಲ್ಲಿಸಿದ್ದರು. ಈ ವೇಳೆ ಸಂತೋಷ್ ಕಾಲುಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಅಗ್ನಿ ಶಾಮಕ ಸಿಂಬಂದಿ ಪ್ರಪಾತಕ್ಕೆ ಇಳಿದು ಶವ ಹೊರ ತೆಗೆದರು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.