ADVERTISEMENT

ಚಿಕ್ಕಮಗಳೂರು: ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:20 IST
Last Updated 3 ಫೆಬ್ರುವರಿ 2020, 13:20 IST
   

ಚಿಕ್ಕಮಗಳೂರು: ನಗರದ ಆಜಾದ್ ವೃತ್ತದಲ್ಲಿ ಕೆಎಸ್ಆರ್‌ಟಿಸಿಬಸ್ಸು ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಜೆ 6 ಗಂಟೆಗೆ ಈಅಪಘಾತಸಂಭವಿಸಿದೆ.ಬಸ್ಸಿನ ಚಕ್ರಗಳು ಕೆಳಗೆ ಸಿಕ್ಕುಮೃತರ ದೇಹ ಛಿದ್ರವಾಗಿದೆ. ಬಸ್ಸು ಚಿಕ್ಕಮಗಳೂರಿನಿಂದ ಜಾವಗಲ್ ಕಡೆಗೆ ಸಂಚರಿಸುತ್ತಿತ್ತು ಎಂದು ಗೊತ್ತಾಗಿದೆ.

'ಪಾದಚಾರಿ ರಸ್ತೆದಾಟುವಾಗ ಬಸ್ಸಿಗೆ ಡಿಕ್ಕಿಯಾಗಿ ಬಿದ್ದರು, ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಪೊಲೀಸರು ಮತ್ತು ಕೆಎಸ್ ಆರ್ಟಿಸಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.ಮುಗುಳವಳ್ಳಿಯ ನಿವೃತ್ತ ಶಿಕ್ಷಕ ಎಂ.ಆರ್. ಶಂಭುಲಿಂಗಪ್ಪ (70) ಎಂಬುವವರು ಮೃತರಾದ ದುರ್ದೈವಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.