ಚಿಕ್ಕಮಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ರಜೆಯಲ್ಲಿ ಚಿಕ್ಕಮಗಳೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕೈಮರದಿಂದ ಮುಂದಿರುವ ಎನ್.ಎಂ.ಡಿ.ಸಿ ಚೆಕ್ ಪೋಸ್ಟ್‌ನಿಂದ ಅಲ್ಲಂಪುರ ತನಕ ಕಾರು, ಜೀಪು, ಮಿನಿ ಬಸ್‌ಗಳು ಸಾಲುಗಟ್ಟಿದ್ದವು.
ಮುಳ್ಳಯ್ಯನಗಿರಿಗೆ ಒಂದು ಅವಧಿಗೆ 600 ವಾಹನಗಳನ್ನು ಸೀಮಿತಗೊಳಿಸಲಾಗಿದೆ. ಗಿರಿ ಏರಿದ್ದ ವಾಹನಗಳು ಇಳಿದ ನಂತರ ಬೇರೆ ವಾಹನಗಳಿಗೆ ಅವಕಾಶ ಮಾಡಲಾಗಿತ್ತು.
ಆನ್‌ಲೈನ್ ಬುಕ್ಕಿಂಗ್ ಇಲ್ಲದ ವಾಹನಗಳನ್ನು ಬೇರೆ ಪ್ರವಾಸಿ ತಾಣಗಳಿಗೆ ಕಳುಹಿಸಲಾಯಿತು. ಚಿಕ್ಕಮಗಳೂರಿಂದ- ಮಲ್ಲೇನಹಳ್ಳಿ- ಸಂತವೇರಿ- ಲಿಂಗದಹಳ್ಳಿ- ತರೀಕೆರೆ ಕಡೆಗೆ ಹೋಗುವ ವಾಹನಗಳೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು.
ಜಿಲ್ಲೆಯ ಎಲ್ಲಾ ರೆಸಾರ್ಟ್, ಹೋಂಸ್ಟೇಗಳು ಭರ್ತಿಯಾಗಿದ್ದವು. ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನ ಜಂಗುಳಿ ಏರ್ಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.