ಚಿಕ್ಕಮಗಳೂರು: ನರಸಿಂಹರಾಜಪುರ ತಾಲ್ಲೂಕಿನಲ್ಲಿ ಉಪಟಳ ನೀಡುತ್ತಿದ್ದ ಮತ್ತೊಂದು ಕಾಡಾನೆಯನ್ನು ಅರಣ್ಯ ಇಲಾಖೆಯು ಕಾರ್ಯಾಚರಣೆಯ ಮೊದಲ ದಿನವೇ ಸೆರೆ ಹಿಡಿದಿದೆ.
ಹಳೇ ಹಾರೇಕೊಪ್ಪ ಅರಣ್ಯದಲ್ಲಿ ಅಂದಾಜು 20 ವರ್ಷದ ಸಲಗವನ್ನು ಸೆರೆ ಹಿಡಿದಿದ್ದು, ಕೊಡಗು ಜಿಲ್ಲೆ ದುಬಾರೆ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಶಿವಮೊಗ್ಗದ ಸಕ್ರೆಬೈಲಿನ ನಾಲ್ಕು, ದುಬಾರೆ ಶಿಬಿರದ ಮೂರು ಸಾಕಾನೆಗಳ ನೆರವನ್ನು ಕಾರ್ಯಾಚರಣೆಗೆ ಪಡೆಯಲಾಗಿತ್ತು. ಕಳೆದ ವಾರ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿದ್ದರು.
ಎರಡು ಆನೆ ಸೆರೆಗೆ ಅನುಮತಿ ಇತ್ತು. ಜು.29ರಂದು ಒಂದು ಆನೆ ಸೆರೆ ಹಿಡಿಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.