ADVERTISEMENT

ಎರಡನೇ ಬಾರಿ ಆಯ್ಕೆ: ಟಿ. ರಘುಮೂರ್ತಿ ದಾಖಲೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 9:03 IST
Last Updated 17 ಮೇ 2018, 9:03 IST
ರಘುಮೂರ್ತಿ
ರಘುಮೂರ್ತಿ   

ಪರಶುರಾಂಪುರ: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ ಒಂದೇ ಪಕ್ಷದಿಂದ ಎರಡು ಬಾರಿ ಸತತವಾಗಿ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನೆ ಬರೆದಿದ್ದಾರೆ.

‘ಈ ಕ್ಷೇತ್ರದಲ್ಲಿ ಈವರೆಗೂ ಯಾರು ಎರಡು ಬಾರಿ ಗೆದ್ದಿರಲಿಲ್ಲ. ಶಾಸಕರು ಈ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಮತ್ತೊಮ್ಮೆ ಅವರು ಶಾಸಕರಾಗಿ ಆಯ್ಕೆಯಾಗಲೂ ಸಹಕಾರಿಯಾಗಿದೆ’ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ ಅಭಿಪ್ರಾಯ.

ಕಳೆದ ಬಾರಿ 63,000 ಮತಗಳಿಸಿದ ಶಾಸಕರು ಈ ಬಾರಿ 72,874 ಮತ ಪಡೆದು 10 ಸಾವಿರ ಹೆಚ್ಚಿಸಿ ಕೊಂಡಿದ್ದಾರೆ. ಅವರು ಮಾಡಿದ ಅಭಿವೃದ್ದಿ ಕೆಲಸವನ್ನು ನೆಚ್ಚಿ ಜನರು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂಬುದು ಸಾರ್ವಜ ನಿಕರ ಅಭಿಪ್ರಾಯ.

ADVERTISEMENT

ರಘುಮೂರ್ತಿಗೆ ಸಚಿವ ಸ್ಥಾನ? ಜೆಡಿಎಸ್ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾದರೆ ಜಿಲ್ಲೆಯಲ್ಲಿ ಯಾರೂ ಇಲ್ಲದ ಕಾರಣ ರಘುಮೂರ್ತಿಯವರು ಜಿಲ್ಲಾ ಉಸ್ತು ವಾರಿ ಸಚಿವರಾಗುತ್ತಾರೆ ಎಂಬ ಮಾತು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿದೆ.

‘ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್‌ ಶಾಸಕರಾಗಿ ಟಿ.ರಘುಮೂರ್ತಿ ಆಯ್ಕೆಯಾ ಗಿರುವುದರಿಂದ ಸಮ್ಮಿಶ್ರ ಸರ್ಕಾರ ರಚನೆಯಾದರೆ ಸಚಿವರಾಗುತ್ತಾರೆ’ ಎಂದು  ಪರಶುರಾಂಪುರ ಹೋಬಳಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದರು.

‘2013-18ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 3 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಕೆಲವೊಂದು ಪೂರ್ಣಗೊಂಡಿದ್ದು, ಇನ್ನೂ  ಕೆಲವು ನಿರ್ಮಾಣ ಹಂತದಲ್ಲಿವೆ. ಜನರು ನನ್ನ ಮೇಲೆ ವಿಶ್ವಾಸವಿಟ್ಟು ಪುನರ್‌ ಆಯ್ಕೆ ಮಾಡಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಿ ಅವರ ಋಣ ತೀರಿಸುತ್ತೇನೆ’ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

**
ಮೊದಲ ಬಾರಿ ಶಾಸಕರಾಗಿದ್ದಾಗ ಚಳ್ಳಕೆರೆ ತಾಲ್ಲೂಕನ್ನು ಜಿಲ್ಲೆಯಲ್ಲಿ ಗಮನ ಸೆಳೆಯುವಂತೆ ಮಾಡಿದ್ದರು. ಈ ಬಾರಿ ಸಚಿವರಾಗುವ ವಿಶ್ವಾಸವಿದ್ದು, ಜಿಲ್ಲೆಯನ್ನು  ಅಭಿವೃದ್ಧಿಪಡಿಸುತ್ತಾರೆ ಎಂಬ ನಂಬಿಕೆ ಇದೆ
ಎಸ್ ಚನ್ನಕೇಶವ, ಎಪಿಎಂಸಿ ಸದಸ್ಯ

ಜೆ ತಿಮ್ಮಯ್ಯ ಪರಶುರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.