ADVERTISEMENT

ಕಲ್ಲುವಳ್ಳಿ ಭಾಗದ ಅಭಿವೃದ್ಧಿಗೆ ₹ 300 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 6:27 IST
Last Updated 14 ಅಕ್ಟೋಬರ್ 2017, 6:27 IST

ಹಿರಿಯೂರು: ‘ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ನೀಡಿದ್ದ ಭರವಸೆಯಂತೆ ತಾಲ್ಲೂಕಿನ ಕಲ್ಲುವಳ್ಳಿ ಭಾಗಕ್ಕೆ ಸುಮಾರು ₹ 300 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ’ ಎಂದು ಶಾಸಕ ಡಿ.ಸುಧಾಕರ್ ಹೇಳಿದರು.

ತಾಲ್ಲೂಕಿನ ದಿಂಡಾವರದಲ್ಲಿ 26 ಫಲಾನುಭವಿಗಳಿಗೆ ಸಹಾಯಧನದ ಚೆಕ್, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಲಕ್ಕೇನಹಳ್ಳಿಯ ವೆಂಕಟೇಶಪ್ಪ ಕುಟುಂಬಕ್ಕೆ ₹ 5 ಲಕ್ಷದ ಪರಿಹಾರದ ಚೆಕ್ ವಿತರಿಸಿ ಅವರು, ದಿಂಡಾವರ ಗ್ರಾಮದಲ್ಲಿ ಮೊರಾರ್ಜಿ ವಸತಿ ಶಾಲಾ ಮಂಜೂರು ಮಾಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ, ಸದಸ್ಯ ಸಿ.ಬಿ.ಪಾಪಣ್ಣ, ಖಾದಿ ರಮೇಶ್, ಜೈಲಾಬ್ದೀನ್, ಅನ್ವರ್ ಸಾಬ್, ಸುರೇಶ್ ಗೌಡ, ದಿಂಡಾವರ ಮಹೇಶ್, ಸೂರಪ್ಪನಹಟ್ಟಿ ನಾಗರಾಜ, ಸರಸ್ವತಿಹಟ್ಟಿ ಶಿವಣ್ಣ, ಬಂಡೆ ಕೃಷ್ಣಪ್ಪ, ಲಕ್ಕೇನಹಳ್ಳಿ ಜಯರಾಂ, ಶ್ರೀನಿವಾಸ್, ರಂಗಸ್ವಾಮಿ, ಮೂರ್ತಿ ಇದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.