ADVERTISEMENT

ಕೃಷಿ ಉನ್ನತಿಗೆ ಪಂಚಸೂತ್ರ ಪರಿಪಾಲನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 6:35 IST
Last Updated 20 ಜನವರಿ 2011, 6:35 IST

ನಾಯಕನಹಟ್ಟಿ:  ಹೆಚ್ಚಿನ ಲಾಭ ತರುವಂತಹ ಬೆಳೆಗಳನ್ನು ಬೆಳೆಯುವತ್ತ ರೈತರು ಕಾರ್ಯಪ್ರವೃತ್ತರಾದರೆ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು ಎಂದು ಪಿಎಲ್‌ಡಿ ಬ್ಯಾಂಕಿನ ಕೃಷಿ ಕ್ಷೇತ್ರಾಧಿಕಾರಿ ಹನುಮಂತನಾಯ್ಕ ಹೇಳಿದರು.

ಇಲ್ಲಿನ ಮೈರಾಡ ಕಛೇರಿಯಲ್ಲಿ ಬುಧವಾರ ಜರುಗಿದ ಎರಡು ದಿನಗಳ ರೈತರ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಮನುಷ್ಯನ ಅಭಿವೃದ್ಧಿ  ಮಾರ್ಗದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರವಿರುತ್ತದೆ ಎಂದು ಸಲಹೆ ನೀಡಿದರು.

ಕೃಷಿಯಲ್ಲಿ ಉನ್ನತಿಯನ್ನು ಸಾಧಿಸಬೇಕಾದರೆ ಪಂಚಸೂತ್ರಗಳನ್ನು ಪಾಲಿಸಬೇಕು. ಸಮಗ್ರ ಪೋಷಕಾಂಶ, ನೀರು, ಪೀಡೆ, ಕಳೆ, ಬೆಳೆ, ನಿರ್ವಹಣೆ ಮಾಡಬೇಕು.  ಪಂಚಸೂತ್ರಗಳನ್ನು ಪಾಲನೆ ಮಾಡುವುದರಿಂದ  ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ಮೈರಾಡ ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕ ಅಶೋಕ್ ವೈ. ಹಗೆದಾಳ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಬೆಳೆಗಳನ್ನು ಬದಲಾಯಿಸಿ. ಏಕ ರೂಪದ ಬೆಳೆಗಳನ್ನು ಪ್ರತಿವರ್ಷವೂ ಬೆಳೆಯುವುದರಿಂದ ಇಳುವರಿ ಕುಂಠಿತಗೊಳ್ಳುತ್ತದೆ. ಬೆಳೆಗಳ ಬದಲಾವಣೆ ಉತ್ತಮ ಇಳುವರಿ ನೀಡಲು ಸಹಕಾರಿಯಾಗುತ್ತದೆ ಎಂದರು.
ನಬಾರ್ಡ್ ಇಂಜಿನಿಯರ್ ಸಿದ್ದಲಿಂಗ ಆರಾಧ್ಯ ಮಾತನಾಡಿದರು. ರೈತ ಒಕ್ಕೂಟದ ಸಣ್ಣಬೋರಯ್ಯ, ಹೋಬಳಿಯ ವಿವಿಧ ಭಾಗಗಳ ಸುಮಾರು ನೂರು ರೈತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.