ADVERTISEMENT

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:37 IST
Last Updated 5 ಸೆಪ್ಟೆಂಬರ್ 2013, 8:37 IST

ಚಿತ್ರದುರ್ಗ:  ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ವಿಭಾಗದಿಂದ 6  ಹಾಗೂ ಪ್ರೌಢಶಾಲಾ ವಿಭಾಗದಿಂದ 5 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಸೆ. 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕರು: ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ, ಬಸವೇಶ್ವರ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾದ ಎ.ಆರ್.ಅಶೋಕ್, ಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ಸಿ.ಕೆಂಚಣ್ಣ, ಚಿತ್ರದುರ್ಗ ಕೆಳಗೋಟೆ ಸ.ಹಿ.ಪ್ರಾ.ಶಾಲೆ ಬಡ್ತಿ ಮುಖ್ಯ ಶಿಕ್ಷಕ ಆರ್.ಎನ್.ಶಿವರುದ್ರಪ್ಪ, ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಸ.ಹಿ.ಪ್ರಾ.ಶಾಲೆ ಬಡ್ತಿ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಹೊಸದುರ್ಗ ತಾಲ್ಲೂಕು ಸೋಮೇನಹಳ್ಳಿ ಸ.ಹಿ.ಪ್ರಾ.ಶಾಲೆ ಬಡ್ತಿ ಮುಖ್ಯ ಶಿಕ್ಷಕ ಕೆ.ಹನುಮಂತಪ್ಪ ಹಾಗೂ ಹೊಳಲ್ಕೆರೆ ತಾಲ್ಲೂಕು ತಣಿಗೆಹಳ್ಳಿ ಸ.ಹಿ.ಪ್ರಾ.ಶಾಲೆ ಸಹ ಶಿಕ್ಷಕ ಜಿ.ರಾಜು ಅವರು ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ:  ಚಿತ್ರದುರ್ಗ ಮಿಲ್ಲತ್ ಪ್ರೌಢಶಾಲೆ ಸಹ ಶಿಕ್ಷಕರಾದ ಬಿ.ಎಚ್.ತಿಪ್ಪೇಸ್ವಾಮಿ, ಮೊಳಕಾಲ್ಮುರು ತಾಲ್ಲೂಕು ಕೋನಸಾಗರ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆ ಸಹ ಶಿಕ್ಷಕ ಟಿ.ಆರ್.ರಾಜಶೇಖರ್, ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ಅನಸೂಯಮ್ಮ, ಚಿತ್ರದುರ್ಗ ತಾಲ್ಲೂಕು ಐನಹಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಗೋವಿಂದಪ್ಪ, ಹಿರಿಯೂರು ತಾಲ್ಲೂಕು  ಧರ್ಮಪುರ ಪಂಚಲಿಂಗೇಶ್ವರ ಪ್ರೌಢಶಾಲೆ ಸಹ ಶಿಕ್ಷಕ ಪಾಂಡುರಂಗಪ್ಪ ಅವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ವಿಶೇಷ ಶಿಕ್ಷಕರ ಪ್ರಶಸ್ತಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಚಳ್ಳಕೆರೆಯ ನಗರಂಗೆರೆ ಸ.ಹಿ.ಪ್ರಾ.ಶಾಲೆ ಸಹ ಶಿಕ್ಷಕ ಚಂದ್ರಣ್ಣ, ಹಿರಿಯೂರಿನ ಕಂಬದಹಳ್ಳಿ ಸ.ಹಿ.ಪ್ರಾ.ಶಾಲೆ ಸಹ ಶಿಕ್ಷಕ ಆನಂದಪ್ಪ, ಹೊಸದುರ್ಗದ ಇಂಡದೇವರಹಟ್ಟಿ ಸ.ಕಿ.ಪ್ರಾ.ಶಾಲೆ ಸಹ ಶಿಕ್ಷಕ ರಾಮಸ್ವಾಮಿ, ಚಿತ್ರದುರ್ಗದ ಹಲಗಪ್ಪನಹಟ್ಟಿ ಸ.ಕಿ.ಪ್ರಾ.ಶಾಲೆ ಸಹ ಶಿಕ್ಷಕ ಸುರೇಶ್, ಹಿರಿಯೂರು ತಾಲ್ಲೂಕಿನ ಅರಳೀಕೆರೆ ಸ.ಕಿ.ಪ್ರಾ. ಶಾಲೆ ಸಹ ಶಿಕ್ಷಕ ಹನುಮಂತನಾಯ್ಕ ಹಾಗೂ ಚಿತ್ರದುರ್ಗದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಪದವೀಧರ ಮುಖ್ಯ ಶಿಕ್ಷಕಿ ಖುತೇಜಾಬಿ ಅವರು ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ: ಹೊಸದುರ್ಗ ತಾಲ್ಲೂಕಿನ ಮಧುರೆ ಚನ್ನಕೇಶವಸ್ವಾಮಿ ಪ್ರೌಢಶಾಲೆ ಸಹ ಶಿಕ್ಷಕ ಗುರುಮೂರ್ತಿ, ಮೊಳಕಾಲ್ಮುರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ರುಬೀನಾ ನಿಖತ್ ಹಾಗೂ ಹಿರಿಯೂರು ತಾಲ್ಲೂಕಿನ ಮಸ್ಕಲ್ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಸುಬ್ರಹ್ಮಣ್ಯ ಅವರು ಜಿಲ್ಲಾ ವಿಶೇಷ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ  ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿತ್ತು. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆ ಅನ್ವಯ ಈ ವರ್ಷ ಶಿಕ್ಷಕರ ದಿನಾಚರಣೆ ಬದಲಾಗಿ ನ. 1ರಂದು ನಡೆಯುವ ಕಾರ್ಯಕ್ರಮದಲ್ಲಿ  ಸನ್ಮಾನಿಸ ಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.