ADVERTISEMENT

ಬದಲಾವಣೆ ನಿರೀಕ್ಷೆಯಲ್ಲಿ ರಾಜ್ಯದ ಜನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:10 IST
Last Updated 5 ಅಕ್ಟೋಬರ್ 2012, 5:10 IST
ಬದಲಾವಣೆ ನಿರೀಕ್ಷೆಯಲ್ಲಿ ರಾಜ್ಯದ ಜನ
ಬದಲಾವಣೆ ನಿರೀಕ್ಷೆಯಲ್ಲಿ ರಾಜ್ಯದ ಜನ   

ಮೊಳಕಾಲ್ಮುರು: ಬಿಜೆಪಿ ಸರ್ಕಾರದ ಆಡಳಿತ ಕಾರ್ಯ ವೈಖರಿಗೆ ಬೇಸತ್ತು ರಾಜ್ಯದ ಜನರಬದಲಾವಣೆ ಬಯಸುತ್ತಾ ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಜಾತ್ಯತೀತ ಜನತಾದಳ ಎಸ್‌ಸಿ, ಎಸ್‌ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಓಬಣ್ಣ ಪೂಜಾರ್ ಹೇಳಿದರು.

ಇಲ್ಲಿ ಪಕ್ಷದ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಈವರೆಗೆ ಅಧಿಕಾರ ನಡೆಸಿದ ಪಕ್ಷಗಳು ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದನೆ ಮಾಡಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ವಿವಿಧ ಜನಪರ ಯೋಜನೆಗಳನ್ನು ಈಗಲೂ ರಾಜ್ಯದ ಜನತೆ ನೆನೆಯುತ್ತಿರುವ ಜರಿಗೆ ಮಾದರಿಯಾಗಿ ಈಗಲೂ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗು ತ್ತಿದೆ. ಈ ಬಗ್ಗೆ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.


ಮುಖಂಡರಾದ ಬೋಗನಹಳ್ಳಿ ರಾಜಣ್ಣ, ಖಲೀಂ ಉಲ್ಲಾ, ಹಮೀದ್‌ಸಾಬ್, ಸಣ್ಣೋಬಣ್ಣ, ಸೈಪುಲ್ಲಾ, ಷಫೀವುಲ್ಲಾ, ರಾಮಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT