ADVERTISEMENT

ಭದ್ರಾ ಮೇಲ್ದಂಡೆ ಕಾಮಗಾರಿ ಕೆಜೆಪಿಯಿಂದ ಸಾಧ್ಯ: ಶೋಭಾ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:42 IST
Last Updated 25 ಏಪ್ರಿಲ್ 2013, 9:42 IST

ಹೊಸದುರ್ಗ: ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅತಿಬೇಗ ಪೂರ್ಣಗೊಳ್ಳಬೇಕಾದರೆ ಕೆಜೆಪಿ ಆಡಳಿತದಿಂದ ಮಾತ್ರ ಸಾಧ್ಯ ಎಂದು ಮಾಜಿ  ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಪಟ್ಟಣದ ಸಿದ್ಧರಾಮ ಸಮುದಾಯ ಭವನದಲ್ಲಿ ಈಚೆಗೆ ಕೆಜೆಪಿ ಅಭ್ಯರ್ಥಿ ಎಸ್. ಲಿಂಗಮೂರ್ತಿ ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕೆಜೆಪಿ ಅಭ್ಯರ್ಥಿ ಎಸ್. ಲಿಂಗಮೂರ್ತಿ ಮಾತನಾಡಿ, ಬಿಎಸ್‌ವೈ ಆಡಳಿತವು ಈ ರಾಜ್ಯದ ಎಲ್ಲಾ ವರ್ಗದ ಜನತೆಗೂ ಸಂವಿಧಾನಾತ್ಮಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಹೆಬ್ಬಳ್ಳಿ ಮಲ್ಲಿಕಾರ್ಜುನ್ ಮಾತನಾಡಿದರು.ಕೆಜೆಪಿಗೆ ಮುಸ್ಲಿಂ, ಕುರುಬ, ಯಾದವ, ದೇವಾಂಗ ಸಮಾಜದ ನೂರಾರು ಕಾರ್ಯಕರ್ತರು ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಕೆಜೆಪಿ ಜಿಲ್ಲಾ ಅಧ್ಯಕ್ಷ ರಮೇಶ್, ತಾಲ್ಲೂಕು ಅಧ್ಯಕ್ಕ ಎ. ಮಂಜುನಾಥ್, ಕಾರ್ಯದರ್ಶಿ ರತ್ನಾಕರ್ ಶೇಠ್, ವಕ್ತಾರ ಸಾಗರ್, ಪುರಸಭಾ ಮಾಜಿ ಅಧ್ಯಕ ಜಬೀಉಲ್ಲಾ, ಸನಾವುಲ್ಲಾ ಖಾನ್, ಅಬ್ದುಲ್ ಲತೀಫ್ ಸಾಬ್, ಅನ್ವರ್ ಸಾಬ್, ದಾದಾಪಿರ್, ಖಾದರ್ ನವಾಜ್, ಇಲಿಯಾಜ್ ಸಾಬ್, ಮಾಜಿ ತಾ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ಅಬ್ದಲ್ ಗನೀಸಾಬ್, ಮೂರ್ತಿನಾಯ್ಕ, ರಾಜಾನಾಯ್ಕ, ಓಂಕಾರನಾಯ್ಕ, ರೈತ ಸಂಘದ ಕರಿಸಿದ್ದಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷ ವೀರಭದ್ರಪ್ಪ, ಶ್ರೀರಾಂಪುರದ ದಾಸಪ್ಪ, ರಮೇಶ್, ಕೋಡಿಹಳ್ಳಿ ಕಿಟ್ಟಪ್ಪ, ಬೆನಕನಹಳ್ಳಿ ಗಂಗಾಧರ್, ಸಾಣೇಹಳ್ಳಿ ಕೃಷ್ಣಮೂರ್ತಿ, ಶಶಿಧರ್, ಅಲ್ತಾಫ್ ಪಾಷಾ, ಅನ್ವರ್, ಮುಜಾಮಿಲ್, ಅಜೀಮಖಾ, ವರ್ತಕ ರಾಜಶೇಖರ್ ಆರಾಧ್ಯ, ಬನ್ಸಿಹಳ್ಳಿ ಕಿರಣ್, ಕೆ.ವಿ. ಮುರುಳೀಧರ್, ಜಯಶೀಲ, ಹೆಬ್ಬಳ್ಳಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.