ADVERTISEMENT

ಮಳೆ ಬಂದರೆ ಪರದಾಡುವ ಶಾಲಾ ಮಕ್ಕಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 6:00 IST
Last Updated 8 ಆಗಸ್ಟ್ 2012, 6:00 IST

ಹಿರಿಯೂರು: ಸ್ವಲ್ಪಮಟ್ಟಿನ ಮಳೆ ಬಂದರೂ ನಗರದ ಮಧ್ಯ ಭಾಗದಲ್ಲಿರುವ ನೆಹರು ಮೈದಾನ ಚಿಕ್ಕ ಹೊಂಡವಾಗುತ್ತದೆ. ಈ ಆವರಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳು ಶಾಲೆ ಪ್ರವೇಶಿಸಲು ಪರದಾಡಬೇಕಾಗುತ್ತದೆ.

ಮೈದಾನದಲ್ಲಿ 10 ಲಕ್ಷ ಗ್ಯಾಲನ್ ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಿಸುತ್ತಿರುವುದರಿಂದ, ಟ್ಯಾಂಕ್ ನಿರ್ಮಾಣಕ್ಕೆಂದು ತೆಗೆದಿರುವ ಬುನಾದಿಯ ಮಣ್ಣು ರಾಶಿ ರಾಶಿ ಬಿದ್ದಿದ್ದು, ಮಳೆಯ ನೀರು ಮೈದಾನದ ಹೊರಗೆ ಹೋಗಲು ಅವಕಾಶ ಇಲ್ಲವಾಗಿದೆ.
 
ಮೈದಾನದ ಅಂಚನ್ನು ಕೆಲವರು ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸಿ ಮೈದಾನದ ಸುತ್ತ ಆವರಣ ಗೋಡೆ ನಿರ್ಮಿಸಬೇಕು. ಮೈದಾನದ ಅಂಚಿಗೆ ಬಾಕ್ಸ್ ಚರಂಡಿ ನಿರ್ಮಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.