ADVERTISEMENT

ವೈಭವದ ಮಾರಿಕಾಂಬ ಜಾತ್ರೆ; ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 6:45 IST
Last Updated 18 ಜನವರಿ 2012, 6:45 IST
ವೈಭವದ ಮಾರಿಕಾಂಬ ಜಾತ್ರೆ; ಮೆರವಣಿಗೆ
ವೈಭವದ ಮಾರಿಕಾಂಬ ಜಾತ್ರೆ; ಮೆರವಣಿಗೆ   

ನಾಯಕನಹಟ್ಟಿ: ಹೋಬಳಿಯ ವಿವಿಧ ಕಡೆ ಶೂನ್ಯಮಾಸದಲ್ಲಿ ಆಚರಿಸುವ ಮಾರಿಕಾಂಬೆಯ ಜಾತ್ರೆ ಮಂಗಳವಾರ ಸಮೀಪದ ಮಾದಯ್ಯನಹಟ್ಟಿ, ಕಾವಲು ಬಸವೇಶ್ವರ ನಗರಗಳಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು.

ಕಾವಲು ಬಸವೇಶ್ವರ ನಗರ ಮತ್ತು ಮಾದಯ್ಯನಹಟ್ಟಿಯಲ್ಲಿ ಸೋಮವಾರ ರಾತ್ರಿ ಕಂಕಣಧಾರಣೆಯೊಂದಿಗೆ ಹಬ್ಬದ ವಿಧಿ ವಿಧಾನಗಳು ಪ್ರಾರಂಭವಾದವು.

ನಂತರ ಮಂಗಳವಾರ ನಿಗದಿತ ಪೂಜಾರಿ ಮನೆತನದವರಿಂದ ಪೂಜಾ ಸಾಮಗ್ರಿಗಳು, ದೇವಿಯ ಆಭರಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನದ ಬಳಿಗೆ ತರಲಾಯಿತು. ಅಲ್ಲಿಂದ ಉತ್ಸವಮೂರ್ತಿಯನ್ನು ಹೊತ್ತು ಐತಿಹಾಸಿಕ ಹಿರೇಕೆರೆಗೆ ಹೊರಟರು. ಜೋಡೆತ್ತಿನ ಬಂಡಿಯಲ್ಲಿ ಗಂಗಾಪೂಜೆಗೆ ಆಗಮಿಸಿದರು.

ಅಲ್ಲಿ ಗಂಗಾಪೂಜೆ ಬಳಿಕ ನಾಯಕನಹಟ್ಟಿಯ ಪ್ರಮುಖ ಬೀದಿಯಲ್ಲಿ ಎರಡೂ ಗ್ರಾಮಗಳವರು ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿದರು.

ನಂತರ ಗ್ರಾಮಗಳಿಗೆ ತೆರಳಿ ಮೆರವಣಿಗೆ ಮಾಡಿ, ಐತಿಹಾಸಿಕ ಜಾನಪದ ನೃತ್ಯವನ್ನು ಮಾಡಿದರು. ಮಣೇವು ಹಾಕುವುದು ಎಲ್ಲರ ಗಮನಸೆಳೆಯಿತು. ಉತ್ಸವದಲ್ಲಿ ಉರಿಮೆ, ತಮಟೆವಾದ್ಯಗಳು, ಸೋಬಾನೆ ಹಾಡುಗಳು ಎಲ್ಲರನ್ನು ಆಕರ್ಷಿಸಿದವು.
 
ಮಧ್ಯರಾತ್ರಿ ದೇವಿಯ ಉತ್ಸವ ಮೂರ್ತಿಯನ್ನು ಸಕಲ ಬಿರುದಾವಳಿಗಳೊಂದಿಗೆ ಗುಡಿ ತುಂಬಿಸಲಾಯಿತು. ಇದಲ್ಲದೇ ನಾಯಕನಹಟ್ಟಿ, ಮನುಮಯ್ಯನಹಟ್ಟಿ ಮತ್ತಿತರ ಕಡೆಗಳಲ್ಲಿ ಮಾರಿಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.