ADVERTISEMENT

ಶಾಲಾ ಕೊಠಡಿ ದುರಸ್ತಿಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:35 IST
Last Updated 6 ಜುಲೈ 2012, 9:35 IST

ನಾಯಕನಹಟ್ಟಿ: ಮಕ್ಕಳ ಹಕ್ಕು ರಕ್ಷಣೆಯ ಬಗ್ಗೆ  ಗುರುವಾರ  ಶಾಲೆಗಾಗಿ ನಾವು- ನೀವು ಕಾರ್ಯಕ್ರಮ ಹೋಬಳಿಯಾದ್ಯಂತ ನಡೆಸಲಾಯಿತು. 

ತಮ್ಮ ಕ್ಷೇತ್ರವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಜನ ಪ್ರತಿನಿಧಿಗಳು ಭೇಟಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸುವುದರ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ವೀಕ್ಷಿಸಿದರು.

ಸ.ಉ.ಪ್ರಾ. ಶಾಲೆ ನಾಯಕನಹಟ್ಟಿ: ಇಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಜಯಮ್ಮ ಬಾಲರಾಜ್ ಸಸಿ ನೆಟ್ಟು ಚಾಲನೆ ನೀಡಿದರು.

ADVERTISEMENT

ನಂತರ ಮಾತನಾಡಿ, ತಮ್ಮ ಅನುದಾನದಲ್ಲಿ ಕೊಠಡಿ ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ಬಾಲರಾಜ, ಗ್ರಾ.ಪಂ. ಉಪಾಧ್ಯಕ್ಷ ಮುನಿಯಪ್ಪ, ಸದಸ್ಯರಾದ ಮುನ್ಸೂರ್, ಯೂಸೂಫ್, ವಿಜಯಲಕ್ಷ್ಮೀ, ಫಾತೀಮಾಬಿ, ಏಕಾಂತಮ್ಮ  ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ ಮತ್ತಿತರರು ಹಾಜರಿದ್ದರು
ಗುಂತಕೋಲಮ್ಮನಹಳ್ಳಿ: ಇಲ್ಲಿ ಜರುಗಿದ ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ್ ತಮ್ಮ ಅನುದಾನದಲ್ಲಿ ಶಾಲೆಗೆ ಪೀಠೋಪಕರಣ ನೀಡಿದರು.

ನಂತರ ಮಾತನಾಡಿ, ಶಾಲೆಯ ಮಕ್ಕಳಿಗೆ ಸಮವಸ್ತ್ರ ಕಲ್ಪಿಸುವ ಭರವಸೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ, ಸಿಬ್ಬಂದಿ ಹಾಜರಿದ್ದರು.

ತಿಮ್ಮಪ್ಪಯ್ಯನಹಳ್ಳಿ: ಗ್ರಾ.ಪಂ. ಅಧ್ಯಕ್ಷೆ ತಿಪ್ಪಮ್ಮ ಮಕ್ಕಳ ಜಾಥಾಕ್ಕೆ ಚಾಲನೆ ನೀಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಮಂಜುನಾಥ್, ಪಿಡಿಒ ವೀರಣ್ಣ, ಗ್ರಾ.ಪಂ. ಸದಸ್ಯರು  ಇ್ದ್ದದರು.

ಧರ್ಮಪುರ ವರದಿ

ಸರ್ಕಾರಿ ಶಾಲೆಗಳಿಗೆ ಗ್ರಾಮಸ್ಥರು ಕೊಡುಗೆ ನೀಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಈ. ಗುಲ್ಜಾರ್‌ಖಾನ್ ತಿಳಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಉರ್ದು ಶಾಲೆಯವರು ಹಮ್ಮಿಕೊಂಡಿದ್ದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷ ಅಮಾನುಲ್ಲಾ,  ಸಿಆರ್‌ಪಿ ನಾಗರಾಜು, ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಖುಷ್ಣುದಾ ಮಾತನಾಡಿದರು.

ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯೆ ಹುಸೇನ್‌ಬೀ, ರತ್ನಮ್ಮ, ಹನುಮಕ್ಕ, ಸುನಂದಮ್ಮ, ಗಂಗಮ್ಮ, ಮಮತಾ, ಮಂಜುನಾಥ್, ಕೆ. ರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.