ADVERTISEMENT

`ಸರ್ಕಾರ ಜನಪರ ಆಡಳಿತ ನೀಡಲಿ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:09 IST
Last Updated 4 ಸೆಪ್ಟೆಂಬರ್ 2013, 5:09 IST

ಚಿತ್ರದುರ್ಗ: ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಸರ್ಕಾರಗಳು ಜನಪರ ಆಡಳಿತ ನೀಡಲು ಮುಂದಾಗಬೇಕು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ನಗರದ ಬಸವಕೇಂದ್ರ ಮುರುಘಾಮಠ, ವೀರಶೈವ ಸಮಾಜ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ `ಶಿಕ್ಷಣ ಶ್ರಾವಣ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವ ಸಕಾರಾತ್ಮಕ ಪ್ರಭಾವಗಳಿಗೆ ಒಳಗಾಗಬೇಕು. ಅದಕ್ಕಾಗಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಜಗತ್ತನ್ನು ತನ್ನತ್ತ ಸೆಳೆಯಲು ನಿರಂತರವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲರಾದ ಸುಧಾದೇವಿ, ಸುಬ್ರಹ್ಮಣ್ಯ, ನಾಗರಾಜ, ಸೋಮ ಹಾಜರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ರವಿಕುಮಾರ್ ಸ್ವಾಗತಿಸಿದರು. ಡಾ.ಗೌಡ ಕಾರ್ಯಕ್ರಮ ನಿರೂಪಿಸಿದರು. ಶ್ರಿಶೈಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.