ADVERTISEMENT

ಸಾಂಸ್ಕೃತಿಕ ಚಟುವಟಿಕೆ ಸಂಭ್ರಮ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:13 IST
Last Updated 2 ಸೆಪ್ಟೆಂಬರ್ 2013, 5:13 IST

ಚಿತ್ರದುರ್ಗ: `ಜಿಲ್ಲೆಯ ಕಲಾವಿದರು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ `ದುರ್ಗದ ಸಿರಿ' ಆಯೋಜಿಸಿರುವಂತಹ ಕಾರ್ಯಕ್ರಮಗಳು  ಹೆಚ್ಚಾಗಿ ನಡೆಯ ಬೇಕು' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಶಾಂತರಾಜ್ ಅಭಿಪ್ರಾಯಪಟ್ಟರು.

ನಗರದ ಎಸ್‌ಜೆಎಂ ಸಭಾಂಗಣದಲ್ಲಿ ದುರ್ಗದ ಸಿರಿ ಕಲಾ ಸಂಘದಿಂದ ಭಾನುವಾರ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ, ಸಾಂಸ್ಕೃತಿಕ ಕ್ಷೇತ್ರದಲ್ಲಿ, ಸಂಗೀತ, ಸಾಹಿತ್ಯ ಕಲೆಯಲ್ಲಿ ಬಹಳ ಶ್ರೀಮಂತವಾಗಿದೆ. ದುರ್ಗದ ಸಿರಿ ಕಲಾ ಸಂಘ ಜಿಲ್ಲೆಯ ನಾನಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿ ರುವುದು ಶ್ಲಾಘನೀಯ ಎಂದರು.

`ಎಲ್ಲರಲ್ಲೂ ಹಣ, ಸಮಯ ಇರುತ್ತದೆ. ಅದನ್ನು ಸದಭಿರುಚಿ ಕಾರ್ಯಕ್ರಮಗಳಿಗೆ ಉಪಯೋಗಿಸಿ ಕೊಳ್ಳಬೇಕು. ಈ ಸಂಘದಿಂದ  ಹೆಚ್ಚು ಕಾರ್ಯಕ್ರಮ ನಡೆಸುವ ಮೂಲಕ ಜಿಲ್ಲೆಯಿಂದ ಉತ್ತಮ ಕಲಾವಿದರು ಹೊರ ಹೊಮ್ಮುವಂತಾಗಲಿ' ಎಂದು ಅವರು ಆಶಿಸಿದರು.

ದುರ್ಗದಸಿರಿ ಕಲಾ ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, `ಕಳೆದ ಕೆಲವು ವರ್ಷಗಳಿಂದ ಪಿ.ಬಿ.ಶ್ರಿನಿವಾಸ್, ಸಿ.ಅಶ್ವಥ್ ಸೇರಿದಂತೆ ಅನೇಕ ಕಲಾವಿದರನ್ನು ಆಹ್ವಾನಿಸಿ ಗೌರವಿಸುವ ಮೂಲಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ ಅವರ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಈ ಸಂಘದ ಉದ್ದೇಶ ಎಂದರು. ಪೊಲೀಸ್ ಇಲಾಖೆಯ ಮಹಾಂತರೆಡ್ಡಿ, ಸಂಘದ ಸದಸ್ಯರಾದ ಅರುಣ್‌ಕುಮಾರ್, ಪಾತ್ಯರಾಜನ್, ರಾಜಣ್ಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.