ADVERTISEMENT

ಕಳುವಾಗಿದ್ದ 10 ಮೊಬೈಲ್ ಫೋನ್ ಮಾಲೀಕರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 16:08 IST
Last Updated 18 ಜೂನ್ 2025, 16:08 IST
ಚಳ್ಳಕೆರೆಯಲ್ಲಿ ಕಳುವಾಗಿದ್ದ ಮೊಬೈಲ್‌ ಫೋನ್‌ಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು
ಚಳ್ಳಕೆರೆಯಲ್ಲಿ ಕಳುವಾಗಿದ್ದ ಮೊಬೈಲ್‌ ಫೋನ್‌ಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು   

ಚಳ್ಳಕೆರೆ: ನಗರದ ಸರ್ಕಾರಿ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ರೈಲ್ವೆ ನಿಲ್ದಾಣ ಸೇರಿದ ವಿವಿಧೆಡೆ ಮಂಗಳವಾರ ಕಳುವಾಗಿದ್ದ ಮೊಬೈಲ್‍ ಫೋನ್‌ಗಳನ್ನು ಪೊಲೀಸ್ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.

₹ 2 ಲಕ್ಷ ಮೌಲ್ಯದ 10 ಮೊಬೈಲ್‍ ಫೋನ್‌ಗಳನ್ನು ವಶಪಡಿಕೊಂಡು, ಅವುಗಳ ಮಾಲೀಕರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಡಿವೈಎಸ್ಪಿ ಟಿ.ಬಿ.ರಾಜಣ್ಣ ಅವರು ಹಸ್ತಾಂತರಿಸಿದರು.

ಪೊಲೀಸ್ ನಿರೀಕ್ಷಕ ಕೆ.ಕುಮಾರ್, ಪಿಎಸ್‍ಐ ಧರಪ್ಪ ದೊಡ್ಡಮನಿ, ಉಪನಿರೀಕ್ಷಕ ಶಿವರಾಜ, ಶ್ರೀನಿವಾಸ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.