ADVERTISEMENT

ಕೋಗುಂಡೆ ಗ್ರಾಮಕ್ಕೆ ಸೂಳೆಕೆರೆ ನೀರು ಹರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 13:26 IST
Last Updated 4 ಜನವರಿ 2018, 13:26 IST

ಭರಮಸಾಗರ: ಸಮೀಪದ ಕೋಗುಂಡೆ ಗ್ರಾಮಕ್ಕೆ ಸೂಳೆಕೆರೆ ನೀರು ಹರಿಸಿ ಶಾಶ್ವತ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೊಳವೆ ಬಾವಿಗಳನ್ನು ಆಶ್ರಯಿಸಬೇಕಾಗಿದೆ. ಕೊಳವೆ ಬಾವಿಗಳು 800 ಅಡಿಗೂ ಹೆಚ್ಚು ಆಳವಿರುವ ಕಾರಣ ಫ್ಲೋರೈಡ್‌ಯುಕ್ತವಾಗಿದೆ. ಇದರಿಂದ ಹೆಚ್ಚಿನ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಕೊಳವೆಬಾವಿ ನೀರು ಸಹ ಸಿಗದೇ ಇರುವ ಕಾರಣ ಟ್ಯಾಂಕರ್‌ಗಳನ್ನು ಆಶ್ರಯಿಸಬೇಕಾಗಿದೆ. ದೂರದ ಸ್ಥಳಗಳಿಂದ ನೀರು ತರಬೇಕಾಗಿದೆ. ಭರಮಸಾಗರದವರೆಗೆ ಸೂಳೆಕೆರೆ ನೀರು ಬರಲಿದ್ದು, ಕೊಳವೆ ಮಾರ್ಗ ಅಳವಡಿಸುವ ಮೂಲಕ ಕೋಗುಂಡೆ ಗ್ರಾಮಕ್ಕೂ ಯೋಜನೆ ವಿಸ್ತರಿಸಬೇಕು. ಗ್ರಾಮಕ್ಕೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.