ADVERTISEMENT

ಹೊಸದುರ್ಗ: ರಾಜ್ಯ ಹೆದ್ದಾರಿಗಿಲ್ಲ ದುರಸ್ತಿ ಭಾಗ್ಯ !

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 9:39 IST
Last Updated 12 ಜನವರಿ 2018, 9:39 IST

ಹೊಸದುರ್ಗ: ಪಟ್ಟಣದಿಂದ ಹೊಳಲ್ಕೆರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ದೇವಿಗೆರೆ–ಮಾವಿನಕಟ್ಟೆ ಮಧ್ಯೆ ಹಾಳಾಗಿ ವರ್ಷ ಕಳೆದರೂ ದುರಸ್ತಿ ಭಾಗ್ಯ ಕಂಡಿಲ್ಲ. ದೇವಿಗೆರೆ, ಹೆರೂರು, ಮಾವಿನಕಟ್ಟೆ, ಬೀಸನಹಳ್ಳಿ ವರೆಗಿನ ಮುಖ್ಯರಸ್ತೆ ಸುಮಾರು 3 4 ಕಿ.ಮೀ ವರೆಗೆ ರಸ್ತೆಗೆ ಹಾಕಿರುವ ಡಾಂಬರ್‌ ಕಿತ್ತು ಹೋಗಿದೆ. ಜಲ್ಲಿ ಕಲ್ಲುಗಳು ಮೇಲಕ್ಕೆದಿವೆ. ಸಾಕಷ್ಟು ಗುಂಡಿಗಳು ಬಿದಿದ್ದು ವಾಹನ ಸವಾರರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಮಾರ್ಗವಾಗಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚನ್ನಗಿರಿ, ಹೊನ್ನಾಳಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ನಿತ್ಯವೂ ನೂರಾರು ಸಂಚರಿಸುತ್ತವೆ. ಬಸ್ಸಿನಲ್ಲಿ ಸಂಚರಿಸುವ ವೃದ್ಧರು, ಗರ್ಭಿಣಿಯರು, ಬಾಣಂತಿಯರು ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ನಿತ್ಯವೂ ಸಾವಿರಾರು ಲಾರಿ, ಟ್ರ್ಯಾಕ್ಟರ್‌, ಕಾರು, ಜೀಪು, ಶಾಲಾ ವಾಹನಗಳು ಸಂಚರಿಸುತ್ತವೆ. ದೊಡ್ಡ ವಾಹನಗಳು ಸಂಚರಿಸುತ್ತಿದಂತೆ ಸಾಕಷ್ಟು ದೂಳು ಹೊರಹೊಮ್ಮುತ್ತಿದೆ ಎನ್ನುತ್ತಾರೆ ವಕೀಲ ಯುವರಾಜು.

ವಾಹನದ ಹಿಂಬದಿ ಹಾಗೂ ಮುಂದಿನಿಂದ ಬರುವ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಕಾಣುವುದಿಲ್ಲ. ಅಷ್ಟೊಂದು ದೂಳು ಬರುತ್ತದೆ. ಬಿಳಿ ಬಟ್ಟೆ ಹಾಕಿಕೊಂಡು ಬಂದರೆ ಬಟ್ಟೆಯಲ್ಲಾ ದೂಳು ಮಯವಾಗುತ್ತದೆ. ರಾತ್ರಿ ಹೊತ್ತಿನಲ್ಲಿ ವೇಗವಾಗಿ ಬಂದ ಬೈಕ್‌ ಸವಾರರು ಹಾಳಾಗಿರುವ ರಸ್ತೆಯಲ್ಲಿ ಬಿದ್ದು ಹಲವು ಗಾಯಗೊಂಡಿದ್ದಾರೆ.

ADVERTISEMENT

ದೊಡ್ಡ ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಳಜಿ ರಸ್ತೆ ದುರಸ್ತಿ ಮಾಡಿಸಿ ವಾಹನ ಸವಾರರ ಹಿತ ಕಾಪಾಡಬೇಕು ಎಂಬುದು ನಾಗರಿಕರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.