ADVERTISEMENT

ಚಿತ್ರದುರ್ಗ: ತಾತ್ಕಾಲಿಕ ಬಾಣಸಿಗರಾದ ಶಾಲಾ‌ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 10:10 IST
Last Updated 8 ಫೆಬ್ರುವರಿ 2018, 10:10 IST
ಚಿತ್ರದುರ್ಗದ ಶಾಲೆಯೊಂದಲ್ಲಿ ಗುರುವಾರ ಬಿಸಿಯೂಟದ ಅಡುಗೆ ತಯಾರಿಯಲ್ಲಿ ತೊಡಗಿದ್ದ ಶಿಕ್ಷಕಿಯರು.
ಚಿತ್ರದುರ್ಗದ ಶಾಲೆಯೊಂದಲ್ಲಿ ಗುರುವಾರ ಬಿಸಿಯೂಟದ ಅಡುಗೆ ತಯಾರಿಯಲ್ಲಿ ತೊಡಗಿದ್ದ ಶಿಕ್ಷಕಿಯರು.   

ಚಿತ್ರದುರ್ಗ: ಬಿಸಿಯೂಟ ನೌಕರರು ದಿಢೀರನೆ ಪ್ರತಿಭಟನೆ ನಡೆಸಿ, ಕೆಲಸಕ್ಕೆ ಗೈರಾಗಿದ್ದು, ಗುರುವಾರ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಅಡುಗೆ ಮಾಡಲು ನಿಂತಿದ್ದಾರೆ.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯರೇ ಅಡುಗೆ ಮಾಡುತ್ತಿದ್ದಾರೆ. ಸುಮಾರು 500 ವಿದ್ಯಾರ್ಥಿನಿಯರಿರುವ ಈ ಶಾಲೆಯಲ್ಲಿ ಐವರು ಬಿಸಿಯೂಟ ತಯಾರಕರು ಬೆಂಗಳೂರಿಗೆ ಪ್ರತಿಭಟನೆಗೆ ಹೋಗಿರುವುದರಿಂದ ಶಿಕ್ಣಕಿಯರೇ ಅನಿವಾರ್ಯವಾಗಿ ಅಡುಗೆ ಕೆಲಸಕ್ಕೆ ನಿಂತಿದ್ದಾರೆ.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯಲ್ಲಿ ಜವಾನರ ಸಹಾಯಪಡೆದು ಶಿಕ್ಷಕರು ಅಡುಗೆ‌ಮಾಡಿಸುತ್ತಿದ್ದಾರೆ. ಕೆಲವು ಕಡೆ ಮಕ್ಕಳೂ ಅಡುಗೆಗೆ ಸಹಾಯ ಮಾಡಿದ್ದರು‌ ಎಂಬ ಸುದ್ದಿ ಹರಿದಾಡುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಹಲವು ಕಡೆ ಒಬ್ಬರು, ಇಬ್ಬರು ಬಿಸಿಯೂಟ ತಯಾರಕರು ಪ್ರತಿಭಟನೆಗೆ ಹೋಗದೇ ಉಳಿದಿದ್ದರಿಂದ ಆ ಶಾಲೆಗಳಲ್ಲಿ ಅಂಥ ಸಮಸ್ಯೆ ಉದ್ಭವವಾಗಿಲ್ಲ.

ನಗರದ ಕೋಟೆ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಕರು ಇಲ್ಲದ ಕಾರಣ ಮಕ್ಕಳನ್ನು ಮಧ್ಯಾಹ್ನ ಮನೆಗೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ‌.

ಒಟ್ಟಾರೆ ಬಿಸಿಯೂಟ ತಯಾರಕರು, ಸಹಾಯಕರ ದಿಢೀರ್  ಗೈರಿನಿಂದಾಗಿ ಶಾಲೆಗಳಲ್ಲಿ ಶಿಕ್ಷಕರು ಅಡುಗೆ ತಯಾರಿಕೆಗೆ ಪರದಾಡುತ್ತಿದ್ದಾರೆ‌.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.