ADVERTISEMENT

ಚಿತ್ರದುರ್ಗ: ಹಳ್ಳಿ ಹಳ್ಳಿಯಲ್ಲಿ ಜಾಗೃತಿ; ಪ್ರಗತಿಯತ್ತ ಅಭಿಯಾನ

ಕೋವಿಡ್‌ ಲಸಿಕೆ: ಕೊನೆಯ ಸ್ಥಾನದಲ್ಲಿದ್ದ ಮೊಳಕಾಲ್ಮುರಿನಲ್ಲಿ 15 ದಿನಗಳಿಂದ ಚುರುಕು

ಕೊಂಡ್ಲಹಳ್ಳಿ ಜಯಪ್ರಕಾಶ
Published 14 ನವೆಂಬರ್ 2021, 6:10 IST
Last Updated 14 ನವೆಂಬರ್ 2021, 6:10 IST
ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದರ ಕಣದಲ್ಲಿ ಶನಿವಾರ ಶೇಂಗಾ ಕಟಾವು ಕಾರ್ಯ ಮಾಡುತ್ತಿದ್ದ ಕಾರ್ಮಿಕರಿಗೆ ಲಸಿಕೆ ಹಾಕುತ್ತಿರುವುದು
ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದರ ಕಣದಲ್ಲಿ ಶನಿವಾರ ಶೇಂಗಾ ಕಟಾವು ಕಾರ್ಯ ಮಾಡುತ್ತಿದ್ದ ಕಾರ್ಮಿಕರಿಗೆ ಲಸಿಕೆ ಹಾಕುತ್ತಿರುವುದು   

ಮೊಳಕಾಲ್ಮುರು:ತಾಲ್ಲೂಕಿನಲ್ಲಿ ಹಳ್ಳಿಹಳ್ಳಿಗಳಲ್ಲಿ, ಹೊಲಗಳಿಗೆ ಹೋಗಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ಲಸಿಕೆ ನೀಡುತ್ತಿದ್ದಾರೆ. ಲಸಿಕೆ ಸಾಧನೆಯಲ್ಲಿ ಕೊನೆ ಸ್ಥಾನದಲ್ಲಿದ್ದ ತಾಲ್ಲೂಕಿನಲ್ಲಿ ಇದರಿಂದ ಪ್ರಗತಿ ಕಾಣುತ್ತಿದೆ.

ಕೋವಿಡ್ ಅನ್ನು ನಿಯಂತ್ರಿಸಲು ಲಸಿಕೆ ಪರಿಣಾಮಕಾರಿ ಎಂದು ಸರ್ಕಾರ ಲಸಿಕೆ ಹಾಕಲು ಒತ್ತು ನೀಡಿದೆ. ಆದರೆ, ಮೂಢನಂಬಿಕೆ ಮತ್ತು ಜಾಗೃತಿ ಕೊರತೆಯಿಂದಾಗಿ ಪ್ರಗತಿಯಲ್ಲಿ ಮೊಳಕಾಲ್ಮುರು ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿತ್ತು. 15 ದಿನಗಳಿಂದಆಶಾದಾಯಕ ಪ್ರಗತಿಕಾಣುತ್ತಿರುವುದು ಹುರುಪು ತಂದಿದೆ.ಜನರು ಲಸಿಕೆ ಹಾಕಿಸಲು ಮಂದೆ ಬರುತ್ತಿರುವ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಮಂದಹಾಸ ಮೂಡಿದೆ.

‘ಲಸಿಕೆ ಆರಂಭಿಕ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಸಾಕು ಜನರು ಜಗಳಕ್ಕೆ ಬರುತ್ತಿದ್ದರು. ಅನೇಕ ಕಡೆ ನಾವು ಹೋಗುವ ಹೊತ್ತಿಗೆ ಮನೆಗಳಿಗೆ ಬೀಗಹಾಕಿಕೊಂಡು ಹೋಗಿರುತ್ತಿದ್ದರು. ಇನ್ನು ಕೆಲವರು ನಮಗೆ ಏನಾದರೂ ಆದರೆ ಯಾರು ಗತಿ. ಮೊದಲು ₹ 25 ಲಕ್ಷದಿಂದ ₹ 50 ಲಕ್ಷ ಪರಿಹಾರ ಕೊಟ್ಟು ಹಾಕಿ ಎಂದು ಸಿಬ್ಬಂದಿಜತೆ ಜಗಳ ಕಾಯುತ್ತಿದ್ದರು. ಈ ವಿಡಿಯೊಗಳು ಸಾಕಷ್ಟು ವೈರಲ್ ಆಗಿದ್ದವು.

ADVERTISEMENT

ತಾಲ್ಲೂಕಿನಲ್ಲಿ ಬುಡಕಟ್ಟು ಜನರುಹೆಚ್ಚು ಇದ್ದಾರೆ. ವಿದ್ಯಾಭ್ಯಾಸದ ಕೊರತೆಯೂ ಇದೆ. ಜನರು ಹಟ್ಟಿ ಯಜಮಾನರು, ಮುಖಂಡರು ಹೇಳಿದಂತೆಕೇಳುತ್ತಿದ್ದರು. ಮುಖಂಡರುಒಪ್ಪಿಗೆ ನೀಡದ ಹೊರತು ಜನರು ಹಾಕಿಸಿಕೊಳ್ಳುವುದಿಲ್ಲ ಎಂದು ಮುಖಂಡರಮನವೊಲಿಸುವ ಕೆಲಸಮಾಡುತ್ತಿದ್ದೇವೆ. ಇದು ಫಲ ನೀಡಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಹೇಳಿದರು.

‘ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಸಹಕಾರಪಡೆಯಲಾಗುತ್ತಿದೆ. ಲಸಿಕೆ ಪಡೆದಿರುವ ಸದಸ್ಯರು ಧೈರ್ಯ ಹೇಳುತ್ತಿರುವ ಕಾರಣ ಲಸಿಕೆಹಾಕಿಸಿಕೊಳ್ಳಲು ಜನರು ಒಪ್ಪಿಗೆನೀಡುತ್ತಿದ್ದಾರೆ. ತಾಲ್ಲೂಕಿನಲ್ಲಿರಾಮಸಾಗರ, ಜೀರಹಳ್ಳಿ, ಹುಚ್ಚಂಗಿದುರ್ಗ, ಚಿಕ್ಕೇರಹಳ್ಳಿ, ರೊಪ್ಪ, ಹನುಮಾಪುರ, ಮಾಚೇನಹಳ್ಳಿ ಸೇರಿ 18 ಗ್ರಾಮಗಳನ್ನು ಲಸಿಕೆನಿರ್ಲಕ್ಷಿಸುತ್ತಿರುವ ಗ್ರಾಮಗಳು ಎಂದು ಗುರುತಿಸಲಾಗಿತ್ತು. ಈಗ ಗ್ರಾಮಗಳಲ್ಲಿ ಹೆಚ್ಚು ಒತ್ತು ನೀಡಿದ್ದು, ಜನರು ಸ್ಪಂದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಬುಧವಾರ ಹಮ್ಮಿಕೊಳ್ಳುವ ವಿಶೇಷ ಲಸಿಕೆ ದಿನವನ್ನು ಉತ್ತಮ ಸಾಧನೆಯಾಗಿರುವ ಸ್ಥಳಗಳಲ್ಲಿ ಮುಂದುವರಿಸಲಾಗುತ್ತಿದೆ. ಜನರು ಹೊಲ, ಕಣ,ಕಾಮಗಾರಿ ಸ್ಥಳ ಎಲ್ಲಿಯೇ ಇದ್ದರೂ ಅಲ್ಲಿಗೆ ಹೋಗಿ ಲಸಿಕೆ ಹಾಕುತ್ತಿದ್ದೇವೆ. ತಾಲ್ಲೂಕಿನಲ್ಲಿ ಶುಕ್ರವಾರ ಪ್ರಥಮ ಶೇ 41 ಮಂದಿಗೆ ಮೊದಲ ಡೋಸ್‌,ಶೇ 51ರಷ್ಟು ಜನರಿಗೆ ದ್ವಿತೀಯ ಡೋಸ್ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬೇರುಮಟ್ಟದಲ್ಲಿ ಜನರು ಇನ್ನಷ್ಟು ಸ್ಪಂದಿಸಲು ಸ್ಥಳೀಯ ಯುವಸಮೂಹ, ಸಂಘ, ಸಂಸ್ಥೆ ಪದಾಧಿಕಾರಿಗಳು, ಅಧಿಕಾರಿಗಳು ಸಹಕಾರ ನೀಡಿದಲ್ಲಿ ಅಭಿಯಾನಇನ್ನಷ್ಟು ಯಶಸ್ವಿಯಾಗಲಿದೆ ಎಂಬುದು ಆರೋಗ್ಯ ಸಿಬ್ಬಂದಿ ಮನವಿ.

*

ಚಿಕ್ಕೇರಹಳ್ಳಿ ಗೊಲ್ಲರಹಟ್ಟಿಯಲ್ಲಿ ಈವರೆಗೆ ಒಂದೂ ಲಸಿಕೆ ಹಾಕಿರಲಿಲ್ಲ. ಶನಿವಾರ ಪ್ರಥಮವಾಗಿ ಲಸಿಕೆ ನೀಡಲಾಗಿದೆ. ಮುಖಂಡರು ಹೇಳಿದರೆ ಮಾತ್ರ ಜನರು ಲಸಿಕೆ ಹಾಕಿಸುತ್ತಿರುವುದು ಕಂಡುಬರುತ್ತಿದೆ.
-ಡಾ. ಸುಧಾ, ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.