ಹೊಸದುರ್ಗ: ಒಳಮೀಸಲಾತಿ ಸಂಬಂಧ ನಡೆಯುತ್ತಿರುವ ದತ್ತಾಂಶ ಸಂಗ್ರಹದ ವೇಳೆ ಸಮೀಕ್ಷಾದಾರರು ಕ್ರಮಬದ್ಧವಾಗಿ ಸಮೀಕ್ಷೆ ಮಾಡಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಲಹೆ ನೀಡಿದರು.
ಸಮೀಕ್ಷೆ ನಡೆಯುತ್ತಿದ್ದ ಸಂಬಂಧ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ತಾಲ್ಲೂಕಿನಾದ್ಯಂತ ಪ್ರತಿ ಮನೆಮನೆಗೂ ಭೇಟಿ ನೀಡಿ ಎಲ್ಲಾ ಮಾಹಿತಿ ಸಂಗ್ರಹಿಸಬೇಕು. ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿ, ಅರ್ಹರಿಗೆ ಸೌಲಭ್ಯ ಸಿಗುವಂತಾಗಲಿ’ ಎಂದು ಸಮೀಕ್ಷಾದಾರರಿಗೆ ಸೂಚಿಸಿದರು.
‘ಶಿಕ್ಷಕರು ತಮಗೆ ವಹಿಸುವ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದ ಪ್ರಗತಿಯಾಗಿಲ್ಲ. ಬೆರಳೆಣಿಕೆಯಷ್ಟು ಜನರ ಮಾಹಿತಿಯನ್ನು ಮಾತ್ರ ನಮೂದಿಸಿದ್ದೇವೆ’ ಎಂದು ಸಮೀಕ್ಷಾದಾರರೊಬ್ಬರು ಮಾಹಿತಿ ನೀಡಿದರು.
ಬಿಇಒ ಸೈಯದ್ ಮೋಸಿನ್, ಬಿ.ಆರ್.ಸಿ. ಶ್ರೀನಿವಾಸ್, ಆಗ್ರೋ ಶಿವಣ್ಣ, ದೀಪಿಕಾ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.