ಚಳ್ಳಕೆರೆ: ಇಲ್ಲಿನ ವಾಲ್ಮೀಕಿ ನಗರದ ಬಳಿ ಸ್ಮಶಾನ ಜಾಗ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಅಧಿಕಾರಿಗಳನ್ನು ಆಗ್ರಹಿಸಿದರು.
ಸ್ಮಶಾನಕ್ಕಾಗಿ ಮೀಸಲಿರಿಸಿದ 10 ಎಕರೆ ಪ್ರದೇಶದಲ್ಲಿ 5 ಎಕರೆ ಒತ್ತುವರಿ ಮಾಡಿ ಮುಳ್ಳು ತಂತಿ ಹಾಗೂ ಕಳ್ಳಿ ಬೇಲಿ ನಿರ್ಮಿಸಲಾಗಿದೆ. ಇದರಿಂದ ಶವಸಂಸ್ಕಾರ ನಡೆಸಲು ತೊಂದರೆಯಾಗಿದೆ ಎಂದು ನಗರಸಭೆ ಸದಸ್ಯೆ ಪಾಲಮ್ಮ ದೂರಿದರು.
ಸ್ಮಶಾನ ಜಾಗ ಒತ್ತುವರಿ ತೆರವಿಗೆ ಒತ್ತಾಯಿಸಿ 3-4 ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಮಾಜಿ ಉಪಾಧ್ಯಕ್ಷೆ ಸುಮಾ ಆಕ್ರೋಶ ವ್ಯಕ್ತಪಡಿಸಿದರು.
ನಿರ್ವಹಣೆ ಕೊರತೆಯಿಂದ ಸ್ಮಶಾನ ಜಾಗದ ರಕ್ಷಣೆಗೆ ಹಾಕಿದ್ದ ಮುಳ್ಳುತಂತಿ ಬೇಕಿ ಕಿತ್ತು ಹೋಗಿದೆ. ಅಳವಡಿಸಿದ್ದ ಕಬ್ಬಿಣದ ಸರಳಿನ ಗೇಟ್ ಮುರಿದು ಬಿದ್ದಿದೆ. ಮುಳ್ಳುಗಿಡಗಳು ಬೆಳೆದಿವೆ. ಸ್ಮಶಾನ ಜಾಗವನ್ನು ಸ್ವಚ್ಛಗೊಳಿಸಿ, ಹದ್ದುಬಸ್ತು ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಗರದ ವಾಸಿ ಮಂಜುನಾಥ, ನಾಗರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.