ADVERTISEMENT

ಚಿಕ್ಕಜಾಜೂರು: ಮೆಕ್ಕೆಜೋಳ ಬಿತ್ತನೆ ಚುರುಕು

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:20 IST
Last Updated 4 ಜೂನ್ 2025, 15:20 IST
ಚಿಕ್ಕಜಾಜೂರಿನ ಜಮೀನೊಂದರಲ್ಲಿ ಬುಧವಾರ ಮೆಕ್ಕೆಜೋಳ ಬಿತ್ತನೆ ಮಾಡುತ್ತಿರುವ ರೈತ ಮಹಿಳೆಯರು
ಚಿಕ್ಕಜಾಜೂರಿನ ಜಮೀನೊಂದರಲ್ಲಿ ಬುಧವಾರ ಮೆಕ್ಕೆಜೋಳ ಬಿತ್ತನೆ ಮಾಡುತ್ತಿರುವ ರೈತ ಮಹಿಳೆಯರು   

ಚಿಕ್ಕಜಾಜೂರು: ಹೋಬಳಿಯ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದಿದೆ.

ಕಳೆದ ವಾರ ಮಳೆ ಬಿಡುವು ನೀಡಿದ್ದರಿಂದ, ಬಿತ್ತನೆಗಾಗಿ ರೈತರು ಭೂಮಿಯನ್ನು ಹಸನು ಮಾಡಿಕೊಂಡಿದ್ದರು. ಸೋಮವಾರ ಹಾಗೂ ಮಂಗಳವಾರ ಸ್ವಲ್ಪ ಮಳೆಯಾಗಿದ್ದು, ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಿಸಿತ್ತು. ಬುಧವಾರ ಹೋಬಳಿಯ ಹಲವೆಡೆ ರೈತರು ಮೆಕ್ಕೆಜೋಳ ಹಾಗೂ ಪಾಪ್‌ಕಾರ್ನ್‌ ಬಿತ್ತನೆ ಮಾಡಿದರು.

ಟ್ರ್ಯಾಕ್ಟರ್‌ಗೆ ಯಂತ್ರದ ಕೂರಿಗೆಯನ್ನು ಜೋಡಿಸಿ, ಸಾಲು ಮಾಡುತ್ತಾ ಕೂಲಿಯವರ ನೆರವಿನಿಂದ ಗೊಬ್ಬರ ಹಾಕಿದರೆ, ಹಿಂದೆ ರೈತ ಕಾರ್ಮಿಕ ಮಹಿಳೆಯರು ಬಿತ್ತನೆ ಬೀಜವನ್ನು ಸಾಲಿನಲ್ಲಿ ಹಾಕುತ್ತಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.