ADVERTISEMENT

ಮೊಳಕಾಲ್ಮುರು ಪಟ್ಟಣ ಸಮೀಪ ಚಿರತೆ ಪ್ರತ್ಯಕ್ಷ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:51 IST
Last Updated 1 ಜುಲೈ 2025, 15:51 IST
ಮೊಳಕಾಲ್ಮುರು ಪಟ್ಟಣದ ಆಂಜನೇಯ ಬಡಾವಣೆ ಬಳಿ ಭಾನುವಾರ ಕಾಣಿಸಿಕೊಂಡಿರುವ ಚಿರತೆ.
ಮೊಳಕಾಲ್ಮುರು ಪಟ್ಟಣದ ಆಂಜನೇಯ ಬಡಾವಣೆ ಬಳಿ ಭಾನುವಾರ ಕಾಣಿಸಿಕೊಂಡಿರುವ ಚಿರತೆ.   

ಮೊಳಕಾಲ್ಮುರು: ಪಟ್ಟಣದ ಕಲಗೋಡ್‌ ಮೊಹಲ್ಲಾ ಮತ್ತು ಆಂಜನೇಯ ಬಡಾವಣೆ ಸಮೀಪದ ಬೆಟ್ಟದಲ್ಲಿ ಭಾನುವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಬಡಾವಣೆಗೆ ಹೊಂದಿಕೊಂಡಿರುವ ಬೆಟ್ಟದ ಕಲ್ಲಿನ ಮೇಲೆ ಹಲವು ಕಾಲ ಚಿರತೆ ಕುಳಿತುಕೊಂಡಿರುವುನ್ನು ಸ್ಥಳೀಯರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇಲ್ಲಿ ಜಾನುವಾರು ಸಾಕಣೆ ಹೆಚ್ಚು ನಡೆಯುತ್ತಿದ್ದು ಅನಾಹುತ ಸಂಭವಿಸುವ ಮುನ್ನ ಸೆರೆ ಹಿಡಿಯಬೇಕು ಎಂದು ಮನವಿ ಮಾಡಲಾಗಿದೆ.

‘ಕೆಲ ದಿನಗಳಿಂದ ಗುಡ್ಡದಹಳ್ಳಿ, ಪೂಜಾರಹಟ್ಟಿಯ ಗುಡ್ಡ ಮತ್ತು ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆಗಾಗ ಕಾಣಿಸಿಕೊಳ್ಳುತ್ತಿರುವ ಚಿರತೆಯು ಇದೇ ಹೋಲಿಕೆ ಇದೆ. ಅದೇ ಚಿರತೆ ನಿತ್ಯ ಚಲನವಲನ ಬದಲಾಯಿಸುವ ಅನುಮಾನವಿದೆ. ಇದರಿಂದ ಬೋನ್‌ ಇಟ್ಟು ಸೆರೆ ಹಿಡಿಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಚಿರತೆ ಓಡಾಟದ ಬಗ್ಗೆ ಪರಿಶೀಲಿಸಿ ಶೀಘ್ರ ಬೋನ್‌ ಇಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯಾಧಿಕಾರಿ ಶಿವಾನಂದ ಜಿಡ್ಡುಮನಿ ತಿಳಿಸಿದರು.

ADVERTISEMENT

ಈಚೆಗೆ ಇಲ್ಲಿಂದ 6 ಕಿ.ಮೀ. ದೂರದ ಕೋನಸಾಗರದ ತೋಪು ಪ್ರದೇಶದಲ್ಲಿಯೂ ಚಿರತೆ ಕಾಣಿಸಿಕೊಂಡು ಹಸು ಮೇಲೆ ದಾಳಿ ನಡೆಸಿತ್ತು. ಆದ್ದರಿಂದ ನಿರ್ಲಕ್ಷ್ಯ ಮಾಡದೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.