ಹಿರಿಯೂರು: ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತುಕ್ಕು ಹಿಡಿದಿದ್ದ ಪೈಪ್‌ಗಳನ್ನು ದುರಸ್ತಿಪಡಿಸಿರುವ ನಗರಸಭೆ, ತನ್ನ ವ್ಯಾಪ್ತಿಯಲ್ಲಿನ ರಾಜಕಾಲುವೆಗಳ ಸ್ವಚ್ಛತೆಗೆ ಮುಂದಾಗಿದೆ.
ರಾಜಕಾಲುವೆಯಲ್ಲಿ ಆಳೆತ್ತರಕ್ಕೆ ಮುಳ್ಳುಕಂಟಿ ಬೆಳೆದಿತ್ತು. ಬಿರುಸಿನ ಮಳೆಯಾದರೆ ಕಾಲುವೆಯಲ್ಲಿ ಮಳೆಯ ನೀರು ಹೋಗಲು ಆಸ್ಪದವಿಲ್ಲದ ಕಾರಣ ಮನೆಗಳಿಗೆ ನುಗ್ಗಬಹುದು ಎಂದು ಅಂದಾಜು ಮಾಡಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಾಗೂ ಸ್ವಚ್ಛತಾ ಸಿಬ್ಬಂದಿ ಕಾಲುವೆ ಶುಚಿಗೊಳಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.
2013 ಹಾಗೂ 2022ರಲ್ಲಿ ಆಗಿರುವ ಮಳೆಯ ಪ್ರಮಾಣವನ್ನು ಅಂದಾಜು ಮಾಡಿ, ಅಂತಹ ಮಳೆಯಾದರೆ ಎಷ್ಟು ಪ್ರಮಾಣದ ನೀರು ಹರಿಯಬಹುದು ಎಂದು ಲೆಕ್ಕ ಹಾಕಿ ರಾಜಕಾಲುವೆಗಳನ್ನು ವಿಸ್ತರಿಸಬೇಕು. ನಂಜುಂಡೇಶ್ವರ ಚಿತ್ರಮಂದಿರದ ಪಕ್ಕದ ರಾಜಕಾಲುವೆಯನ್ನು ಶುಚಿಗೊಳಿಸಬೇಕು. ವೇದಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವವರಿಗೆ ಬೇರೆ ಕಡೆ ವಸತಿ ಕಲ್ಪಿಸಿ ಅಲ್ಲಿಂದ ತೆರವುಗೊಳಿಸಬೇಕು. ರಾಜಕಾಲುವೆ ಅಥವಾ ಮನೆಯ ಮುಂದಿನ ಚರಂಡಿ ಒತ್ತುವರಿ ಮಾಡಿ ಕಾಂಪೌಂಡ್ ಅಥವಾ ಮಹಡಿಗೆ ಹೋಗಲು ಮೆಟ್ಟಿಲು ಹಾಕಿದ್ದರೆ ಅಂತಹವನ್ನು ತೆರವುಗೊಳಿಸಿ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.