ಹೊಳಲ್ಕೆರೆ: ‘ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ನೀಡಬೇಕು’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ದಾವಣಗೆರೆ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ರೈತ ಸಂಘದ ತಾಲ್ಲೂಕು ಘಟಕಕ್ಕೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿ ಅವರು ಮಾತನಾಡಿದರು.
‘ರೈತ ಸಂಘದ ಪದಾಧಿಕಾರಿಗಳು ರೈತರ ಪರವಾಗಿ ಹೋರಾಟ ಮಾಡಬೇಕು. ರೈತರಿಗೆ ಅನ್ಯಾಯ ಆದರೆ ತಕ್ಷಣವೇ ಸ್ಪಂದಿಸಬೇಕು. ಕೃಷಿ, ನೀರಾವರಿಗೆ ಹೋರಾಟ ನಡೆಸಬೇಕು. ಹೆಚ್ಚು ಗ್ರಾಮ ಘಟಕಗಳನ್ನು ಸ್ಥಾಪಿಸುವ ಮೂಲಕ ಸಂಘಟನೆ ಮಾಡಬೇಕು’ ಎಂದು ಸೂಚಿಸಿದರು.
ದುಮ್ಮಿ ಚಿತ್ತಪ್ಪ, ರೈತಸಂಘದ ಅಧ್ಯಕ್ಷ ಕಾಗಳಗೆರೆ ಗೊಲ್ಲರಹಟ್ಟಿ ಸಿದ್ದುರಾಜು, ಉಪಾಧ್ಯಕ್ಷ ವಸಂತ ಕುಮಾರ್, ಜಿ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಪಂಪಾಪುರ, ಖಜಾಂಚಿ ಸಂತೋಷ್, ನಿರ್ದೇಶಕರಾದ ನಾಗರಾಜ್, ಮಲ್ಲಿಕಾರ್ಜುನ, ಕಾರ್ಯದರ್ಶಿ ಬೊಮ್ಮನಕಟ್ಟೆ ತಿಮ್ಮೇಶ್, ತಿಪ್ಪೇಸ್ವಾಮಿ, ಮಾರುತಿ, ಗೌರಿ ರಾಜಕುಮಾರ್, ಯುವಸೇನೆ ಘಟಕದ ಅಧ್ಯಕ್ಷ ರಾಜಪ್ಪ, ಪುರಸಭೆ ಸದಸ್ಯ ಮಂಜುನಾಥ್ ಸಂಗನಗುಂಡಿ, ಪರಮೇಶ್ವರಪ್ಪ, ಗಂಗಾಧರಪ್ಪ, ಅಂಜನ್ ಕುಮಾರ್, ಸಿದ್ದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.