ADVERTISEMENT

ದೊಡ್ಡಾಲಗಟ್ಟ ದೇವಾಲಯದ ಹುಂಡಿಗೆ ಕನ್ನ

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:37 IST
Last Updated 30 ಮೇ 2025, 15:37 IST
   

ಸಿರಿಗೆರೆ: ಸಮೀಪದ ದೊಡ್ಡಾಲಗಟ್ಟ ಗ್ರಾಮದ ಹೊರ ವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿನ ಹುಂಡಿಗೆ ಕನ್ನ ಹಾಕಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ದೇವಸ್ಥಾನದ ಗೇಟಿನ ಬೀಗವನ್ನು ಒಳ ಆವರಣದ ವಿದ್ಯುತ್‌ ದೀಪಗಳನ್ನು ಆರಿಸಿ ಹುಂಡಿಯನ್ನು ಒಡೆದು ಅದರೊಳಗಿನ ಕಾಣಿಕೆ ಹಣವನ್ನು ದೋಚಲಾಗಿದೆ. ಗ್ರಾಮಸ್ಥರು ಶುಕ್ರವಾರ ಬೆಳಿಗ್ಗೆ ಪೂಜೆಗೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದ್ದು, ಸಿರಿಗೆರೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿರಿಗೆರೆ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.