ADVERTISEMENT

‘ರೈತರಿಗೆ ಕೃಷಿ ಬೆಲೆ ಸ್ವಾತಂತ್ರ್ಯ ಕೊಡಿ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 3:46 IST
Last Updated 13 ಆಗಸ್ಟ್ 2022, 3:46 IST
ಹೊಳಲ್ಕೆರೆಯಲ್ಲಿ ಶುಕ್ರವಾರ ರೈತ ಸಂಘದ ಸದಸ್ಯರು ಕೃಷಿ ಬೆಲೆ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಹೊಳಲ್ಕೆರೆಯಲ್ಲಿ ಶುಕ್ರವಾರ ರೈತ ಸಂಘದ ಸದಸ್ಯರು ಕೃಷಿ ಬೆಲೆ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಹೊಳಲ್ಕೆರೆ: ರೈತರಿಗೆ ಕೃಷಿ ಬೆಲೆ ಸ್ವಾತಂತ್ರ್ಯ ಕೊಡಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರೇಖಾ ಅವರಿಗೆ ಮನವಿ ಸಲ್ಲಿಸಿದರು.

ಎಲ್ಲಾ ಕಂಪನಿಗಳಿಗೆ ತಮ್ಮ ಉತ್ಪನ್ನಗಳ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ಇದೆ. ಆದರೆ ರೈತನ ಬೆಳೆಗಳಿಗೆ ಮಾತ್ರ ಖರೀದಿದಾರರು ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ರೈತ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಸರ್ಕಾರ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ನೀಡಬೇಕು ಇಲ್ಲದಿದ್ದರೆ ರೈತರು ತಾವು ಬೆಳೆದ ರಾಗಿ, ಜೋಳ ಮತ್ತಿತರ ಬೆಳೆಗಳನ್ನು ಬ್ಯಾಂಕ್ ಸಾಲಕ್ಕೆ, ವಿದ್ಯುತ್ ಶುಲ್ಕ ಹಾಗೂ ಸರ್ಕಾರದ ಎಲ್ಲಾ ವ್ಯವಸ್ಥೆಗಳಿಗೆ ಜಮಾ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಎಚ್ಚರಿಸಿದರು.

ಬೆಲೆ ಭದ್ರತೆ ಕಾಯ್ದೆಯು C2+50 ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾರ್ಗದರ್ಶಿ ಸೂತ್ರದಲ್ಲಿಇರಬೇಕು. ರೈತರ ಸಾಲಗಳ ಹೊಣೆಗಾರಿಕೆ
ಯನ್ನು ಸರ್ಕಾರಗಳೇ ಹೊರಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಅಪ್ಪರಸನಹಳ್ಳಿ ಬಸವರಾಜಪ್ಪ, ಜಿ.ಎಸ್.ಚಂದ್ರಮೌಳಿ, ನಾಗರಾಜ್, ಸದಾಶಿವಪ್ಪ, ಶಿವಕುಮಾರ್, ಶಿವಮೂರ್ತಪ್ಪ, ಪ್ರಸನ್ನ, ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.