ADVERTISEMENT

ಮೊಳಕಾಲ್ಮುರಿನಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 6:22 IST
Last Updated 12 ಡಿಸೆಂಬರ್ 2022, 6:22 IST
ಮಳೆಯಿಂದಾಗಿ ಮೊಳಕಾಲ್ಮುರಿನಲ್ಲಿ ರಸ್ತೆ ಕೆಸರುಮಯವಾಗಿರುವುದು
ಮಳೆಯಿಂದಾಗಿ ಮೊಳಕಾಲ್ಮುರಿನಲ್ಲಿ ರಸ್ತೆ ಕೆಸರುಮಯವಾಗಿರುವುದು   

ಚಿತ್ರದುರ್ಗ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಸೃಷ್ಟಿಯಾಗಿರುವ ಮ್ಯಾಂಡಸ್‌ ಚಂಡಮಾರುತ ಜಿಲ್ಲೆಯಲ್ಲಿ ಮಳೆ ಸುರಿಸುತ್ತಿದೆ. ಮೊಳಕಾಲ್ಮುರಿನಲ್ಲಿ 43 ಮಿ.ಮೀ ಮಳೆ ಬಿದ್ದಿದ್ದು, ಜಿಲ್ಲೆಯಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ರಾಯಪುರ 36 ಮಿ.ಮೀ., ಬಿ.ಜಿ.ಕೆರೆ 26 ಮಿ.ಮೀ., ದೇವಸಮುದ್ರ 25 ಮಿ.ಮೀ., ಚಳ್ಳಕೆರೆ 34 ಮಿ.ಮೀ., ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ 20 ಮಿ.ಮೀ., ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ 25 ಮಿ.ಮೀ., ಹಿರಿಯೂರು ತಾಲ್ಲೂಕಿನ ಈಶ್ವರಗೆರೆ 27 ಮಿ.ಮೀ. ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿ 29 ಮಿ.ಮೀ., ತುರುವನೂರು 23 ಮಿ.ಮೀ. ಮಳೆಯಾಗಿದೆ.

ಮೊಳಕಾಲ್ಮುರು ವರದಿ: ತಾಲ್ಲೂಕಿನಾದ್ಯಂತ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಪಟ್ಟಣದಲ್ಲಿ ನಡೆಯುತ್ತಿರುವ ಹಾನಗಲ್- ರಾಯದುರ್ಗ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯಿಂದಾಗ ಸಾರ್ವಜನಿಕರು ಓಡಾಡಲುತೊಂದರೆ ಅನುಭವಿಸಿದರು. ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನ ಬೆಳೆಗಳ ಕಟಾವು, ಹಸನು ಕಾರ್ಯ ಸಾಗುತ್ತಿದ್ದು ಮಳೆಯು ಇದಕ್ಕೆ ಅಡ್ಡಿಮಾಡಿದೆ.
ಮಳೆ ಮುಂದುವರಿದಲ್ಲಿ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.