ಹಿರಿಯೂರು: ತಾಲ್ಲೂಕಿನ ಕರಿಯಾಲ ಗ್ರಾಮದಲ್ಲಿ ಭಾನುವಾರ ರಾತ್ರಿ ಎರಡು ವಾರದ ಅಂತರದಲ್ಲಿ ಎರಡನೇ ಬಾರಿಗೆ ಬೀಸಿದ ಬಿರುಗಾಳಿಗೆ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದ್ದು, ಬಿರುಗಾಳಿಯ ಹೊಡೆತಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯ ಶೀಟ್‌ಗಳು ಹಾರಿ ಹೋಗಿವೆ. ತೋಟಗಳಲ್ಲಿನ ನೂರಾರು ಅಡಿಕೆ, ತೆಂಗು ಹಾಗೂ ಬಾಳೆ ನೆಲಕ್ಕೆ ಬಿದ್ದಿವೆ. ಬೃಹತ್ ಗಾತ್ರದ ಮರ ಮುರಿದು ಮನೆಯ ಮೇಲೆ ಬಿದ್ದಿದೆ.
ಏ. 11ರಂದು ರಾತ್ರಿ ಬೀಸಿದ ಬಿರುಗಾಳಿಗೆ ಕರಿಯಾಲ ಗ್ರಾಮದಲ್ಲಿನ ಹತ್ತಾರು ಮನೆಗಳಿಗೆ ಹಾನಿಯಾಗಿತ್ತು. ನೂರಾರು ಅಡಿಕೆ, ತೆಂಗಿನ ಮರಗಳು ಮುರಿದು ಬಿದ್ದಿದ್ದವು. ಘಟನೆ ಮಾಸುವ ಮುಂಚೆಯೇ ಬಿರುಗಾಳಿ ಮತ್ತೊಮ್ಮೆ ರುದ್ರನರ್ತನ ಮಾಡಿ ರೈತರು ಬೆಚ್ಚಿಬೀಳುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.