ADVERTISEMENT

ಮನೆ ಕುಸಿತ, ಸಿಡಿಲಿಗೆ ಕುರಿಗಳು ಸಾವು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:42 IST
Last Updated 11 ಅಕ್ಟೋಬರ್ 2020, 4:42 IST
ಚಳ್ಳಕೆರೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಬಾಲೇನಹಳ್ಳಿ ಗ್ರಾಮದ ಹನುಮಂತಪ್ಪ ಅವರ ವಾಸದ ಮನೆ ಕುಸಿದಿರುವುದು
ಚಳ್ಳಕೆರೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಬಾಲೇನಹಳ್ಳಿ ಗ್ರಾಮದ ಹನುಮಂತಪ್ಪ ಅವರ ವಾಸದ ಮನೆ ಕುಸಿದಿರುವುದು   

ಚಳ್ಳಕೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಕುರುಡಿಹಳ್ಳಿ ಗ್ರಾಮದ ಬೊಮ್ಮಕ್ಕ, ಬಾಲೇನಹಳ್ಳಿ ಹನುಮಂತಪ್ಪ, ಬುಡ್ನಹಟ್ಟಿ ಕಮಲಮ್ಮರವರ ಮನೆಗಳು ಭಾಗಶಃ ಕುಸಿದಿವೆ.

ಇದರಿಂದ ₹ 70 ಸಾವಿರ ಮತ್ತು ರಾಮಜೋಗಿಹಳ್ಳಿ ಗ್ರಾಮದ ಬಿ. ನಾಗೇಂದ್ರಪ್ಪ ಚೌಧರಿ ಹಾಗೂ ಡಿ.ಐಯ್ಯಣ್ಣ ರವರ ಜಮೀನಿಗೆ ಮಳೆ ನೀರು ನುಗ್ಗಿ ₹ 20 ಸಾವಿರ ಸೇರಿ ತಾಲ್ಲೂಕಿನಲ್ಲಿ ಒಟ್ಟು ₹ 90 ಸಾವಿರ ನಷ್ಟವಾಗಿದೆ ಎಂದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

ನಾಯಕನಹಟ್ಟಿ–1 ಸೆಂ.ಮೀ, ದೇವರಮರಿಕುಂಟೆ–3.3 ಸೆಂ.ಮೀ, ಚಳ್ಳಕೆರೆ ಕಸಬಾ– 1.3 ಸೆಂ.ಮೀ, ಪರಶುರಾಂಪುರ– 1.4 ಹಾಗೂ ತಳಕು– 1.2 ಸೆಂ.ಮೀ ಸೇರಿ ತಾಲ್ಲೂಕಿನಲ್ಲಿ ಒಟ್ಟು 8.5 ಸೆಂ.ಮೀ. ಮಳೆಯಾಗಿದೆ.

ADVERTISEMENT

ಸಿಡಿಲು ಬಡಿದು ನಾಲ್ಕು ಕುರಿಗಳು ಸಾವು: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ವರವಿನವರಹಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ನಾಲ್ಕು ಕುರಿಗಳು ಸಾವನ್ನಪ್ಪಿವೆ.

ಹುಲೆಪಾಪಯ್ಯ ಅವರಿಗೆ ಸೇರಿದ ಕುರಿಗಳು ಮನೆಯ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಇದರಿಂದ ₹ 35 ಸಾವಿರ ನಷ್ಟವಾಗಿದೆ ಎಂದು ಹುಲೆಪಾಪಯ್ಯ
ತಿಳಿಸಿದ್ದಾರೆ.

ಕೊಟ್ಟಿಗೆ ಬಳಿ ಇದ್ದ ಇಬ್ಬರು ಯುವಕರು ಪಾರಾಗಿದ್ದಾರೆ.ಪ್ರಕರಣ ದಾಖಲಾಗಿದೆ ಎಂದು ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.