ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಕಸವಿಗೊಂಡನಹಳ್ಳಿ ಗ್ರಾಮದ ಮಧ್ಯೆ ಹಾದು ಹೋಗಿರುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಪೈಪ್‍ಲೈನ್ ಒಡೆದು ಗ್ರಾಮದ ಮಹಿಳೆ ಮಲ್ಲಕ್ಕ ಎಂಬುವರ ಮನೆಯ ಸುತ್ತ ನೀರು ತುಂಬಿಕೊಂಡು ಮನೆಗೋಡೆ ಕುಸಿದಿದೆ.
ಇದರಿಂದ ನೀರು ಮನೆ ಒಳಗೆ ನುಗ್ಗಿದ್ದರಿಂದ ಬಟ್ಟೆ, ಹಾಸಿಗೆ, ಹೊದಿಕೆ, ಆಹಾರ ಪದಾರ್ಥ ಮತ್ತು ಅಕ್ಕಿ, ರಾಗಿ ಮುಂತಾದ ದವಸ ಧಾನ್ಯ ಹಾಳಾಗಿದ್ದು ಅಂದಾಜು ₹ 50 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ.
‘ಪೈಪ್‍ಲೈನ್ ಕಾಮಗಾರಿ ಕಳಪೆಯಾಗಿರುವುದರಿಂದ ಪೈಪ್ ಒಡೆದು ನೀರು ಮನೆ ಸುತ್ತ ಆವರಿಸಿಕೊಂಡು ಗೋಡೆ ಕುಸಿದು ಬಿದ್ದಿದೆ. ಹೀಗಾಗಿ ವೃದ್ಧೆ ಮಲ್ಲಕ್ಕ ಅವರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.