ADVERTISEMENT

ಬಯಕೆಗೆ ಕಡಿವಾಣ ಹಾಕುವವನೇ ಜಂಗಮ: ಡಾ.ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 4:06 IST
Last Updated 13 ಆಗಸ್ಟ್ 2022, 4:06 IST
ಚಿತ್ರದುರ್ಗದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಗುರುವಾರ ನಡೆದ ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು.
ಚಿತ್ರದುರ್ಗದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಗುರುವಾರ ನಡೆದ ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು.   

ಚಿತ್ರದುರ್ಗ: ಕೆಲವೊಮ್ಮೆ ತಪ್ಪು ಮಾಡುವ ಸಂದರ್ಭ ಬರುತ್ತದೆ. ಆದರೆ, ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲವಾದರೆ ಕಾಲವೇಅದನ್ನು ತಿದ್ದುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರುತಿಳಿಸಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಗುರುವಾರ ನಡೆದ ‘ನಿತ್ಯ ಕಲ್ಯಾಣ; ಮನೆ ಮನೆಗೆ ಚಿಂತನ’ ಕಾರ್ಯಕ್ರಮದಲ್ಲಿ ‘ಅಪರಾಧಿ ಪ್ರಜ್ಞೆ’ ಕುರಿತು ಅವರು ಮಾತನಾಡಿದರು.

‘ಅರಿವಿನ ಅಭಾವದಿಂದಾಗಿ ಅಜ್ಞಾನಿಗಳ ಬದುಕಿನಲ್ಲಿ ತಪ್ಪುಗಳು ನಿರಂತರವಾಗಿ ನಡೆಯುತ್ತವೆ. ಗೊತ್ತಿಲ್ಲದೆ ತಪ್ಪು ಮಾಡುವವರದು ತಪ್ಪಿನ ಸರಮಾಲೆ ಆಗಿರುತ್ತದೆ.ಗಾಂಧೀಜಿ ಹೇಳಿದಂತೆ ಬ್ರಹ್ಮಾಂಡ ಮಾನವನ ಎಲ್ಲ ಬಯಕೆಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಬೇಕು ಎನ್ನುವವನು ಬಡವ, ಸಾಕು ಎನ್ನುವವನು ಶ್ರೀಮಂತ. ಬದುಕು ಬಯಕೆಗಳ ಸಂಗಮ. ಈ ಎಲ್ಲದಕ್ಕೂ ಕಡಿವಾಣ ಹಾಕುವವನು ನಿಜವಾದ ಜಂಗಮ’ ಎಂದು ಹೇಳಿದರು.

ADVERTISEMENT

‘ಎಲ್ಲ ಧರ್ಮಗಳ ಆಚೆಗೆ ಕಾಲಧರ್ಮ ಇದೆ. ಧರ್ಮದ ಮೂಲ ದ್ರವ್ಯ ಒಳ್ಳೆಯತನ. ಒಳ್ಳೆಯತನ ನಮ್ಮನ್ನು ದೊಡ್ಡತನದ ಕಡೆಗೆ ಕರೆದುಕೊಂಡು ಹೋಗುತ್ತದೆ’ ಎಂದರು.

ಚಿತ್ರದುರ್ಗ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶರಣೆ ರಶ್ಮಿ, ಸಂಗಮೇಶ್ವರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ರಾಜಶೇಖರಪ್ಪ, ಶಿಲ್ಪಾ ಭರತ್‌, ನಾಗರಾಜ್‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.