ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಬೆಲಗೂರು ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿರಕ್ಷಾ ಬಿ.ಜಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 621 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಚಿರಕ್ಷಾ ಬಿ.ಜಿ. ಬೆಂಗಳೂರಿನ ವ್ಯಾಪಾರಿ ಗಂಗಣ್ಣ ಬಿ.ಕೆ. ಹಾಗೂ ಸರ್ಕಾರಿ ಶಾಲೆ ಶಿಕ್ಷಕಿ ಶಶಿಕಲಾ ಬಿ.ಪಿ. ಅವರ ಪುತ್ರಿ.
‘ಶಿಕ್ಷಕರೊಟ್ಟಿಗೆ ಸದಾ ಸಂಪರ್ಕದಲ್ಲಿರುತ್ತಿದ್ದೆ. ಏನೇ ಗೊಂದಲ ಬಂದರೂ ಕೂಡಲೇ ಶಿಕ್ಷಕರಿಂದ ಉತ್ತರ ಕಂಡುಕೊಳ್ಳುತ್ತಿದ್ದೆ. ಪ್ರಶ್ನೆ ಪತ್ರಿಕೆಗಳನ್ನು ನೋಡುವುದು, ಪುನರ್ ಮನನ ಮಾಡುತ್ತಿದ್ದೆ. ಪೂರ್ವ ಸಿದ್ಧತಾ ಪರೀಕ್ಷೆಗಳಿಂದ ಅನುಕೂಲವಾಯಿತು. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರ ಸಹಕಾರ ಚೆನ್ನಾಗಿತ್ತು. ನನ್ನ ಅಕ್ಕ ಮಾರ್ಗದರ್ಶನ ನೀಡಿದಳು’ ಎಂದು ಚಿರಕ್ಷಾ ಬಿ.ಜಿ. ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಳು.
ಬಿಇಒ ಸೈಯದ್ ಮೋಸಿನ್, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ಆಂಥೋನಿ ಥಾಮಸ್ ಪ್ರಸನ್ನ, ಮುಖ್ಯಶಿಕ್ಷಕಿ ಅಮಲೋದ್ಬವ ರಾಣಿ ಸಹಶಿಕ್ಷಕರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.