ADVERTISEMENT

ರಾಷ್ಟ್ರೀಯ ಅಕಾಡೆಮಿ ಶಾಲೆ: 30 ವಿದ್ಯಾರ್ಥಿಗಳಿಗೆ ಶೇ 95ಕ್ಕೂ ಹೆಚ್ಚು ಅಂಕ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:27 IST
Last Updated 3 ಮೇ 2025, 13:27 IST
ಆರ್. ಇಂಚರ
ಆರ್. ಇಂಚರ   

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ರಾಷ್ಟ್ರೀಯ ಅಕಾಡೆಮಿ ಶಾಲೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊದಲ ಮೂರೂ ಸ್ಥಾನಗಳು ಈ ಶಾಲೆಯ ಪಾಲಾಗಿವೆ.

ಶಾಲೆಯ ಮೌಲ್ಯ ಡಿ. ರಾಜ್ ಹಾಗೂ ಎಚ್.ಓ. ನಂದನ್ 625ಕ್ಕೆ 625 ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 130 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 75 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ 5 ವಿದ್ಯಾರ್ಥಿಗಳು 125ಕ್ಕೆ 125 ಅಂಕ, ಇಂಗ್ಲಿಷ್‌ನಲ್ಲಿ 7, ಹಿಂದಿಯಲ್ಲಿ 25, ಗಣಿತದಲ್ಲಿ 14, ವಿಜ್ಞಾನದಲ್ಲಿ 9 ಹಾಗೂ ಸಮಾಜ ವಿಜ್ಞಾನದಲ್ಲಿ 18 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ಆರ್. ಇಂಚರ 623, ಆರ್.ಎನ್.ನಿಶಾಂತ್ 621, ವಿಶೇಷ್ ವಿ.ಜೈನ್ 621, ವಿಭಾ ವಿ.ಗೌಡ 620 ಹಾಗೂ ಎಂ.ನಿಶ್ಚಿತ 619 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ADVERTISEMENT
ಆರ್.ಎನ್.ನಿಶಾಂತ್
ವಿಶೇಷ್ ವಿ. ಜೈನ್
ವಿಭಾ ವಿ. ಗೌಡ
ಎಂ. ನಿಶ್ಚಿತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.