ADVERTISEMENT

ಹಿರಿಯೂರು: ಎಸ್‌ಎಸ್‌ಎಲ್‌ಸಿ ಟಾಪರ್ಸ್‌ಗೆ ತಲಾ ₹ 1 ಲಕ್ಷ ಬಹುಮಾನ ಘೋಷಣೆ

ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅಭಿನಂದಿಸಿದ ಸಚಿವ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:59 IST
Last Updated 3 ಮೇ 2025, 13:59 IST
ಹಿರಿಯೂರು ನಗರದಲ್ಲಿರುವ ಎಸ್ ಎಸ್ ಎಲ್ ಸಿ ಟಾಪರ್ ನಂದನ್ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೇಟಿ ನೀಡಿ ಅಭಿನಂದಿಸಿದರು.
ಹಿರಿಯೂರು ನಗರದಲ್ಲಿರುವ ಎಸ್ ಎಸ್ ಎಲ್ ಸಿ ಟಾಪರ್ ನಂದನ್ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೇಟಿ ನೀಡಿ ಅಭಿನಂದಿಸಿದರು.   

ಹಿರಿಯೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಟಾಪರ್ಸ್ ಆಗಿ ಹೊರಹೊಮ್ಮಿರುವ ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ಎಚ್.ಓ. ನಂದನ್ ಹಾಗೂ ಮೌಲ್ಯ ಡಿ. ರಾಜ್ ಅವರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಶನಿವಾರ ಭೇಟಿ ನೀಡಿ ಅಭಿನಂದಿಸಿ, ತಲಾ ₹ 1 ಲಕ್ಷ ಬಹುಮಾನ ಘೋಷಿಸಿದರು.

‘ಉನ್ನತ ವ್ಯಾಸಂಗ ಮಾಡಲು ತೊಂದರೆ ಇದ್ದಲ್ಲಿ ಖಂಡಿತಾ ನೆರವು ನೀಡುತ್ತೇನೆ. 625ಕ್ಕೆ 625 ಅಂಕ ತೆಗೆಯುವುದು ಸುಲಭದ ವಿಚಾರವಲ್ಲ. ನನ್ನ ಕ್ಷೇತ್ರದ ಇಬ್ಬರು ಮಕ್ಕಳು ಅಂತಹ ಸಾಧನೆ ಮಾಡಿರುವುದು ವೈಯಕ್ತಿಕವಾಗಿ ಖುಷಿ ಕೊಟ್ಟಿದೆ’ ಎಂದು ಸುಧಾಕರ್ ಹೇಳಿದರು.

‘ತಾವು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಪಿಗ್ಮಿ ಸಂಗ್ರಹಿಸಲು ಅವಕಾಶ ಕಲ್ಪಿಸಿದ್ದಿರಿ. ಅದರಿಂದ ಬರುತ್ತಿದ್ದ ಕಮಿಷನ್ ಹಣದಲ್ಲಿ ಮೂವರು ಮಕ್ಕಳನ್ನು ಓದಿಸಿದ್ದೇನೆ. ದೊಡ್ಡ ಮಗಳ ಓದು ಮುಗಿಯುವ ಹಂತದಲ್ಲಿದೆ. ಇನ್ನಿಬ್ಬರ ಓದಿನ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ’ ಎಂದು ನಂದನ್ ಅವರ ತಂದೆ ಓಂಕಾರೇಶ್ವರ ಭಾವುಕರಾಗಿ ಸಚಿವ ಸುಧಾಕರ್ ಅವರಿಗೆ ನಮಸ್ಕರಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಮುಖಂಡರಾದ ಖಾದಿ ರಮೇಶ್, ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಮುಕುಂದ, ಬಿ.ಎನ್.ಪ್ರಕಾಶ್, ಟಿ.ಚಂದ್ರಶೇಖರ್, ಕಲ್ಲಟ್ಟಿ ಹರೀಶ್, ಕೃಷ್ಣಮೂರ್ತಿ, ವಿ.ಶಿವಕುಮಾರ್, ಜ್ಞಾನೇಶ್, ಆರ್.ಟಿ.ಎಸ್. ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.