ಹೊಸದುರ್ಗ: ಶಾಸಕ ಬಿ.ಜಿ.ಗೋವಿಂದಪ್ಪ ಅವರ ನೇತೃತ್ವದಲ್ಲಿ ಶನಿವಾರ (ಜೂ.28ರಂದು) ನಡೆಯಲಿರುವ ಹೊಸದುರ್ಗ ಬಂದ್‌ಗೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಬೆಂಬಲ ಸೂಚಿಸಿದೆ.
‘ನೆಲ, ಜಲ, ಭಾಷೆ ವಿಚಾರವಾಗಿ ಸಾಹಿತ್ಯ ಪರಿಷತ್ ಸದಾ ಹೋರಾಟ ನಡೆಸುತ್ತಾ ಬಂದಿದೆ. ಭದ್ರಾ ಜಲಾಶಯದಿಂದ ಬಲದಂಡೆ ಮೂಲಕ ಹೊಸದುರ್ಗ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ದಾವಣಗೆರೆ ಜಿಲ್ಲೆಯ ಕೆಲವು ಸಂಘಟನೆಗಳು ಪ್ರತಿಭಟನೆ ಮೂಲಕ ತಡೆಯೊಡ್ಡುವ ಕೆಲಸ ಮಾಡಿವೆ. ಈ ಪ್ರಯುಕ್ತ ತಾಲ್ಲೂಕಿನ ಜನರ ನೀರಿನ ಹಕ್ಕಿಗಾಗಿ ಸರ್ವಪಕ್ಷಗಳು, ರೈತ ಸಂಘಟನೆಗಳು, ವರ್ತಕರ ಸಂಘಗಳು ಬೆಂಬಲ ಸೂಚಿಸಿದ್ದು, ನಮ್ಮ ಸಂಘಟನೆಯಿಂದಲೂ ಬಂದ್‌ಗೆ ಸಹಮತವಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ಶಾಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.