ಚಿಕ್ಕಜಾಜೂರು: ಸಮೀಪದ ಕಡೂರು ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಅಂಗವಾಗಿ ಭಾನುವಾರ ಭಕ್ತರು ಕೆಂಡಾರ್ಚನೆ ಸೇವೆ ಸಲ್ಲಿಸಿದರು.
ಚಿಕ್ಕಜಾಜೂರು ಸಮೀಪದ ಕಡೂರು ವೀರಭದ್ರಸ್ವಾಮಿಗೆ ಬೆಳಿಗ್ಗೆ ಅಭಿಷೇಕ ಮಾಡಲಾಯಿತು. ರಾಜ್ಯದ ವಿವಿಧ ಕಡೆಗಳಿಂದ ಹರಕೆ ತೀರಿಸಲು ಬಂದಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಮುಂಭಾಗದಲ್ಲಿನ ಅಗ್ನಿ ಕುಂಡಕ್ಕೆ ಬೆಂಕಿ ಹಾಕಿ, ಪೂಜೆ ಸಲ್ಲಿಸಲಾಯಿತು.
ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದ ಪುಷ್ಕರಣಿಯಲ್ಲಿ ಗಂಗಾ ಪೂಜೆಯನ್ನು ನಡೆಸಿ ನಂತರ, ಉತ್ಸವ ಮೂರ್ತಿಯನ್ನು ದೇವಸ್ಥಾನದ ಮುಂಭಾಗಕ್ಕೆ ಹೊತ್ತು ತರಲಾಯಿತು. ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದ ನಂತರ, ಪಲ್ಲಕ್ಕಿಯನ್ನು ಹೊತ್ತ ಭಕ್ತರು ಮೂರು ಬಾರಿ ಅಗ್ನಿಕುಂಡವನ್ನು ಪ್ರವೇಶಿಸಿದರು. ಕೆಂಡಾರ್ಚನೆ ನಂತರ ಭಕ್ತರು ಇಷ್ಟ ದೇವರಿಗೆ ಭಕ್ತಿ ಸಮರ್ಪಿಸಿದರು.
ಗರ್ಭಗುಡಿಯಲ್ಲಿನ ಸ್ವಾಮಿಗೆ ಮಹಾ ಮಂಗಳಾರತಿ ನಡೆಸಲಾಯಿತು. ನಂತರ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.