ADVERTISEMENT

ಕೋಗುಂಡೆಯ ಕೆ.ಎಲ್.‌ ಸಚಿನ್‌ ಐಎಫ್‌ಎಸ್‌ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 16:16 IST
Last Updated 19 ಮೇ 2025, 16:16 IST
ಕೆ.ಎಲ್.‌ ಸಚಿನ್
ಕೆ.ಎಲ್.‌ ಸಚಿನ್   

ಸಿರಿಗೆರೆ: ಭರಮಸಾಗರದ ಸಮೀಪದ ಕೋಗುಂಡೆ ಗ್ರಾಮದ ಕೆ.ಎಲ್.‌ಸಚಿನ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 143ನೇ ರ‍್ಯಾಂಕ್‌ ಗಳಿಸುವ ಮೂಲಕ ಐ.ಎಫ್.ಎಸ್.‌ ಸೇವೆಗೆ ಆಯ್ಕೆಯಾಗಿದ್ದಾರೆ.

ಸಚಿನ್‌ ಅವರ ತಂದೆ ಎಚ್.ಸಿ.ಲೋಕೇಶ್‌ ಕೃಷಿಯಲ್ಲಿ ತೊಡಗಿದ್ದಾರೆ. ತಾಯಿ ಆರ್.‌ಎಚ್.‌ಪುಷ್ಪ ಶಿಕ್ಷಕಿಯಾಗಿದ್ದಾರೆ.

ಭರಮಸಾಗರದ ಡಿ.ವಿ.ಎಸ್.‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ದಾವಣಗೆರೆಯ ಅನುಭವ ಮಂಟಪದಲ್ಲಿ ಪ್ರೌಢ ಶಿಕ್ಷಣ ಹಾಗೂ ಬೆಂಗಳೂರಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು.

ADVERTISEMENT

ಸುರತ್ಕಲ್‌ನ್‌ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದರು. ಸಚಿನ್‌ ಅವರು ಯಾವುದೇ ತರಬೇತಿ ಸಂಸ್ಥೆಗೆ ದಾಖಲಾಗದೆ ಸ್ವ ಪರಿಶ್ರಮದಿಂದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.