ಸಿರಿಗೆರೆ: ವಾಣಿವಿಲಾಸ ಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಹಲವು ಭಾಗಗಳಿಗೆ ಕುಡಿಯುವ ನೀರು ತರುವ ಇಚ್ಛೆ ಇದ್ದು, ಅದಕ್ಕಾಗಿ ₹ 68 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.
ಸಮೀಪದ ಸಿದ್ದಾಪುರ ಗ್ರಾಮದಲ್ಲಿ ₹ 4 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಊರಿನ ಕೆರೆ ತುಂಬಿಸಿ:
ಗ್ರಾಮದ ಗೋಕಟ್ಟೆ ಸಮೀಪವೇ ಸಾಸ್ವೆಹಳ್ಳಿ ಯೋಜನೆಯ ಪೈಪ್‌ಲೈನ್ ಭೀಮಸಮುದ್ರ ಕೆರೆಯವರೆಗೆ ಹೋಗಿದೆ. ಆ ಮೂಲಕ ಗೋಕಟ್ಟೆಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟವೂ ಸುಧಾರಿಸುತ್ತದೆ ಎಂದು ಸಿದ್ದಾಪುರ ಗ್ರಾಮಸ್ಥರು ಮನವಿ ಮಾಡಿದರು.
ಈ ಬಗ್ಗೆ ಚರ್ಚಿಸಿ ತಿಳಿಸುವುದಾಗಿ ಶಾಸಕರು ಭರವಸೆ ನೀಡಿದರು.
ಯುವ ಮೋರ್ಚಾ ಕಾರ್ಯದರ್ಶಿ ಕೆ.ಬಿ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಪ್ರದೀಪ್, ಸದಸ್ಯ ಬಸವರಾಜಪ್ಪ, ಪ್ರಕಾಶ್, ಬಸವರಾಜಯ್ಯ, ಎಸ್.ಎಂ.ಸದಾನಂದ್, ಸಿರಿಗೆರೆ ಪಂಚಾಕ್ಷರಯ್ಯ, ಪೆಟ್ರೋಲ್ ಬಸವರಾಜ್ ಭಾಗವಹಿಸಿದ್ದರು.
ವಿಘ್ನೇಶ್ವರ ಸ್ಟುಡಿಯೊ ಮಾಲೀಕ ಎಸ್. ಚಿದಾನಂದ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.