ADVERTISEMENT

ಸರ್ಕಾರಿ ಭೂಮಿ ಗ್ರಾಮ ಠಾಣೆಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 7:12 IST
Last Updated 11 ನವೆಂಬರ್ 2021, 7:12 IST
ಚಳ್ಳಕೆರೆ ತಾಲ್ಲೂಕಿನ ಬಸವಿಗೊಂಡನಹಳ್ಳಿ ಗ್ರಾಮಸ್ಥರು ಹುಲುಬನಿ ಜಾಗವನ್ನು ಗ್ರಾಮ ಠಾಣೆ ಸೇರಿಸಲು ಆಗ್ರಹಿಸಿ ಬುಧವಾರ ಧರಣಿ ನಡೆಸಿದರು
ಚಳ್ಳಕೆರೆ ತಾಲ್ಲೂಕಿನ ಬಸವಿಗೊಂಡನಹಳ್ಳಿ ಗ್ರಾಮಸ್ಥರು ಹುಲುಬನಿ ಜಾಗವನ್ನು ಗ್ರಾಮ ಠಾಣೆ ಸೇರಿಸಲು ಆಗ್ರಹಿಸಿ ಬುಧವಾರ ಧರಣಿ ನಡೆಸಿದರು   

ಬಸವಿಗೊಂಡನಹಳ್ಳಿ (ಚಳ್ಳಕೆರೆ): ಹುಲುಬನಿ ಭೂಮಿಯನ್ನು ಗ್ರಾಮಠಾಣೆಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಘಟಪರ್ತಿ ಗ್ರಾಮ ಪಂಚಾಯಿತಿ ಬಸವಿಗೊಂಡನಹಳ್ಳಿ ಗ್ರಾಮಸ್ಥರು ಬುಧವಾರ ಧರಣಿ ಸತ್ಯಾಗ್ರಹ ನಡೆಸಿದರು.

‘ಕೆ. ತಿಪ್ಪೇಸ್ವಾಮಿ ಎಂಬುವವರು ಗ್ರಾಮದ ಸರ್ವೆ ನಂ– 1ರ 5 ಎಕರೆ 16 ಗುಂಟೆ ಹುಲುಬನಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಡಲು ಮುಂದಾಗಿದ್ದಾರೆ. ಸರ್ಕಾರಿ ಜಾಗವನ್ನು ಈ ರೀತಿ ಖಾಸಗಿಯವರಿಗೆ ಖಾತೆ ಮಾಡುವುದು ಖಂಡನೀಯ.ಬಸವಿಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹುಲುಬನಿ ಜಾಗ ಗ್ರಾಮ ಠಾಣೆಗೆ ಸೇರಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿದ ತಹಶೀಲ್ದಾರ್ ಎನ್. ರಘುಮೂರ್ತಿ, ಅಗತ್ಯ ದಾಖಲೆ ಹಾಗೂ ಸ್ಥಳವನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಮುಖಂಡರಾದ ನಾಗರಾಜ, ಓಬಳೇಶ, ಎನ್. ಪ್ರಕಾಶ, ಸುರೇಶ್, ರಂಗಸ್ವಾಮಿ, ಶ್ರೀಧರ, ಲೋಕೇಶ, ತಿಮ್ಮಣ್ಣ, ಮಹಾಂತೇಶ, ಮಂಜುನಾಥ, ಬಸವರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.