ಮೊಳಕಾಲ್ಮುರು: ‘ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಯಾದವ ಸಮಾಜವು ಮುಖ್ಯವಾಹಿನಿಗೆ ಬರಲು ಹೆಚ್ಚು ಶ್ರಮ ವಹಿಸಬೇಕಿದೆ’ ಎಂದು ಯಾದವ ಸಮಾಜದ ಮುಖಂಡ ಜಿ.ಸಿ. ನಾಗರಾಜ್ ಹೇಳಿದರು.
ತಾಲ್ಲೂಕು ಯಾದವ ಸಮಾಜ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮಾಜವು ಸಂಘಟನೆಗೆ ಆದ್ಯತೆ ಕೊಡಬೇಕು, ಇಲ್ಲವಾದಲ್ಲಿ ಪೈಪೋಟಿ ಯುಗದಲ್ಲಿ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ. ಜನಾಂಗದಲ್ಲಿ ಅಭಿವೃದ್ಧಿ ಹೊಂದಿರುವ ವ್ಯಕ್ತಿಗಳು ಸಮಾಜವನ್ನು ಕಟ್ಟಿ ಮುನ್ನಡೆಸಲು ಕೈಜೋಡಿಸಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಗೆ ಮೂಢನಂಬಿಕೆಗಳನ್ನು ಕೈಬಿಡಬೇಕು’ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮರ್ಲಹಳ್ಳಿ ರವಿಕುಮಾರ್, ಮುಖಂಡರಾದ ಜಿ.ಎ. ಜಯಣ್ಣ, ಜಿ.ಟಿ. ತಿಮ್ಮಯ್ಯ, ಬಿ.ಬಲರಾಮ್, ಪಿ.ಟಿ. ಹಟ್ಟಿ ಈರಣ್ಣ, ನಿಂಗಣ್ಣ, ಲಕ್ಷ್ಮೀಪತಿ, ಡಿ.ಜೆ. ದಿನೇಶ್ ಕುಮಾರ್, ಡಿ.ಜೆ. ಪ್ರವೀಣ್ ಕುಮಾರ್, ಪಾಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.