ADVERTISEMENT

ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟನೆ

ಬಸವೇಶ್ವರ ಆಸ್ಪತ್ರೆಯಲ್ಲಿ ಶಿವಮೂರ್ತಿ ಮುರುಘಾ ಶರಣರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2018, 10:48 IST
Last Updated 25 ಸೆಪ್ಟೆಂಬರ್ 2018, 10:48 IST
ವಿಶ್ವ ಔಷಧ ತಜ್ಞರ ದಿನದ ಅಂಗವಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಮಂಗಳವಾರ ಶಿವಮೂರ್ತಿ ಮುರುಘಾ ಶರಣರು ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ ಉದ್ಘಾಟಿಸಿದರು.
ವಿಶ್ವ ಔಷಧ ತಜ್ಞರ ದಿನದ ಅಂಗವಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಮಂಗಳವಾರ ಶಿವಮೂರ್ತಿ ಮುರುಘಾ ಶರಣರು ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ ಉದ್ಘಾಟಿಸಿದರು.   

ಚಿತ್ರದುರ್ಗ:ವಿಶ್ವ ಔಷಧ ತಜ್ಞರ ದಿನದ ಅಂಗವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿಮಂಗಳವಾರಶಿವಮೂರ್ತಿ ಮುರುಘಾ ಶರಣರು ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನೂತನವಾಗಿ ತೆರೆಯಲಾದ ಈ ಕೇಂದ್ರವೂ ಉಪಯುಕ್ತವಾಗಲಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಎಸ್‌ಜೆಎಂ ಔಷಧ ಮಹಾವಿದ್ಯಾಲಯದಿಂದ ಜೆಎಂಐಟಿ ಕಾಲೇಜು ಆವರಣದಲ್ಲಿ ಔಷಧ ವನ ಉದ್ಘಾಟನೆ, ಜನೌಷಧ ಕೇಂದ್ರದ ಕುರಿತು ಬೀದಿ ನಾಟಕ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯೂ ಕೂಡ ಶರಣರು ಪಾಲ್ಗೊಂಡಿದ್ದರು.

ADVERTISEMENT

ಔಷಧಗಳ ಉಪಯೋಗ ಕುರಿತು ಕೋಡಯ್ಯನ ಹಟ್ಟಿಯವರೆಗೂ ಜಾಗೃತಿ ಜಾಥಾ ಸಂಚರಿಸಿತು. ಈ ಸಂದರ್ಭದಲ್ಲಿ ವಿವಿಧ ರೋಗಗಳ ಹಾಗೂ ಅವುಗಳನ್ನು ಗುಣಪಡಿಸುವ ವಿಧಾನಗಳ ಬಗ್ಗೆ ಅರಿವು ಮೂಡಿಸಲು ಮುಂದಾಯಿತು. ವಿದ್ಯಾಲಯದ ನೂರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಾ. ಮಾರುತಿ ಏಕ್ಬೊಟಿ ಮಾತನಾಡಿ, ಸುಮಾರು 50 ಕ್ಕೂ ಅಧಿಕ ಔಷಧೀಯ ಗುಣಗಳಿರುವ ಔಷಧ ವನದಿಂದ ಇದರ ಬಗ್ಗೆ ಆಸಕ್ತಿ ಇರುವಂಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಔಷಧ ನಿಯಂತ್ರಣ ಇಲಾಖೆಯ ಪ್ರಭಾರೆ ಆರ್‌ಎಡಿಸಿಪರುಶುರಾಮ್, ಔಷಧ ಸಂಘದ ಅಧ್ಯಕ್ಷ ಓಂಕಾರಮೂರ್ತಿ, ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ವೈ.ಬಿ.ಮಹೇಂದ್ರನಾಥ್, ಪ್ರಾಚಾರ್ಯೆ ಡಾ.ಡಿ.ಆರ್.ಭಾರತಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ. ಡಾ. ಚಿತ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.