ADVERTISEMENT

ಚಿಕ್ಕಜಾಜೂರು: ಬಿಟ್ಟು ಬಿಡದೆ ಸುರಿದ ಮಳೆ; ರೈತರ ಮೊಗದಲ್ಲಿ ಸಂತಸದ ನಗು

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:40 IST
Last Updated 20 ಮೇ 2025, 15:40 IST
ಚಿಕ್ಕಜಾಜೂರಿನಲ್ಲಿ ಮಂಗಳವಾರ ಬೆಳಿಗ್ಗೆ ಬಿರುಸಿನ ಮಳೆ ಸುರಿಯಿತು
ಚಿಕ್ಕಜಾಜೂರಿನಲ್ಲಿ ಮಂಗಳವಾರ ಬೆಳಿಗ್ಗೆ ಬಿರುಸಿನ ಮಳೆ ಸುರಿಯಿತು    

ಚಿಕ್ಕಜಾಜೂರು: ಬಿ. ದುರ್ಗ ಹೋಬಳಿಯಾದ್ಯಂತ ಮಂಹಳವಾರ ಬಿರುಸಿನ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಚಿಕ್ಕಜಾಜೂರು ಸುತ್ತಮುತ್ತ ಸೋಮವಾರ ಸೋನೆ ಮಳೆಯಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಬೆಳಿಗ್ಗೆ 10-15ಕ್ಕೆ ಬಿರುಸಿನ ಮಳೆ ಆರಂಭವಾಗಿ ಸುಮಾರು 20 ನಿಮಿಷಗಳ ಕಾಲ ಸುರಿಯಿತು. ಮತ್ತೆ ಮಧ್ಯಾಹ್ನ ಅರ್ಧ ಗಂಟೆಹೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ. ಇದರಿಂದಾಗಿ ತೋಟ ಹಾಗೂ ಜಮೀನುಗಳಲ್ಲಿ ಅಲ್ಲಲ್ಲಿ ನೀರು ನಿಂತಿದ್ದುದು ಕಂಡು ಬಂದಿತು.

ಸಮೀಪದ ಆಡನೂರು, ಪಾಡಿಗಟ್ಟೆ, ಅಪ್ಪರಸನಹಳ್ಳಿ, ಚನ್ನಪಟ್ಟಣ, ಎಮ್ಮಿಗನೂರು, ಕೊಡಗವಳ್ಳಿ ಮೊದಲಾದ ಕಡೆಗಳಲ್ಲಿ ಹದ ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.