ADVERTISEMENT

ಆಲಿಕಲ್ಲು ಸಹಿತ ಗಾಳಿ ಮಳೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:32 IST
Last Updated 27 ಏಪ್ರಿಲ್ 2025, 16:32 IST
ಹೊಸದುರ್ಗದ ಬೆಲಗೂರು ಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ನಾಗರತ್ನಮ್ಮ ಅವರ ಮನೆ ಮೇಲೆ ಮರ ಬಿದ್ದಿರುವುದು
ಹೊಸದುರ್ಗದ ಬೆಲಗೂರು ಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ನಾಗರತ್ನಮ್ಮ ಅವರ ಮನೆ ಮೇಲೆ ಮರ ಬಿದ್ದಿರುವುದು   

ಹೊಸದುರ್ಗ: ಶ್ರೀರಾಂಪುರ ಹೋಬಳಿಯ ಶ್ರೀರಾಂಪುರ, ಬೆಲಗೂರು, ಮಾಳಿಗೆಹಟ್ಟಿ, ಗುಡ್ಡದನೇರಲಕೆರೆ, ಹೊಸಕೆರೆ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 7 ಗಂಟೆ ವರೆಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.

ಗುಡ್ಡದನೇರಲಕೆರೆ ಗ್ರಾಮದ ವನಜಾಕ್ಷಮ್ಮ ಅವರ ವಾಸದ ಮನೆ ಬಿದ್ದಿದ್ದು ಸುಮಾರು ₹1 ಲಕ್ಷ ನಷ್ಟವಾಗಿದೆ. ಬೆಲಗೂರು ಗ್ರಾಮದಲ್ಲಿ ಆದ ‌ಆಲಿಕಲ್ಲು ಮಳೆಯಿಂದಾಗಿ ಶೆಡ್‌ಗೆ ಹೊದಿಸಿದ್ದ ಶೀಟ್‌ಗಳು ನೆಲಕ್ಕುರುಳಿವೆ. 6 ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅದೇ ಗ್ರಾಮದ ನಾಗರತ್ನಮ್ಮ ಅವರ ಮನೆ ಮೇಲೆ ಮರ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ‌. ಮಾಳಿಗೆಹಟ್ಟಿ ಗ್ರಾಮದ ಶಿವಮೂರ್ತಿ ಅವರ ವಾಸದ ಮನೆಗೋಡೆ ಕುಸಿದಿದ್ದು, ಅಪಾರ ನಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT