ಹೊಳಲ್ಕೆರೆ: ತಾಲ್ಲೂಕಿನ ಅರೇಹಳ್ಳಿ ಭೋವಿಹಟ್ಟಿಯಲ್ಲಿ ಶಾಸಕ ಎಂ.ಚಂದ್ರಪ್ಪ ಅವರು ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಈಚೆಗೆ ಚಾಲನೆ ನೀಡಿದರು.
ಗ್ರಾಮದಲ್ಲಿ ಉತ್ತಮ ಮನೆಗಳನ್ನು ಕಟ್ಟಿಸಿಕೊಡುತ್ತೇನೆ. ಹೊಸ ದೇವಸ್ಥಾನ ನಿರ್ಮಿಸಿದ್ದೇನೆ. ಗ್ರಾಮದ ಮತ್ತೊಂದು ದೇವಾಲಯಕ್ಕೆ ₹30 ಲಕ್ಷ ಅನುದಾನ ನೀಡಿದ್ದು, ಅದನ್ನು ಬಳಸಿಕೊಂಡಿಲ್ಲ. ಗ್ರಾಮಸ್ಥರು ಒಟ್ಟಾಗಿ ಸೇರಿ ಹೊಸ ದೇವಸ್ಥಾನ ಕಟ್ಟಿಸಿಕೊಳ್ಳಿ ಎಂದು ಚಂದ್ರಪ್ಪ ಹೇಳಿದರು.
ತಾಲ್ಲೂಕಿನಲ್ಲಿ ರೈತರ ಅನುಕೂಲಕ್ಕಾಗಿ 400ಕ್ಕೂ ಹೆಚ್ಚು ಹೊಸ ಚೆಕ್ ಡ್ಯಾಂ, ಕೆರೆ, ಬ್ಯಾರೇಜ್ ನಿರ್ಮಿಸಿದ್ದೇನೆ. ವಿದ್ಯುತ್, ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಮಾಡಲಾಗಿದೆ. ಎಲ್ಲಾ ಕಡೆ ರಸ್ತೆ, ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.
ಗ್ರಾಮದ ಮುಖಂಡರಾದ ಕಾಟಪ್ಪ, ರಾಜಣ್ಣ, ಬೋರಪ್ಪ, ಪ್ರಸನ್ನ, ರಾಮಣ್ಣ, ರಂಗಸ್ವಾಮಿ, ಓಬಣ್ಣ, ಕೆ.ಆರ್.ಐ.ಡಿ.ಎಲ್. ಎಂಜಿನಿಯರ್ ತೇಜಸ್ ಹಾಗೂ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.