ಹೊಸದುರ್ಗ (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ನಡೆಸುವ ಶಿವಕುಮಾರ ರಂಗಪ್ರಯೋಗ ಶಾಲೆಯ ಒಂದು ವರ್ಷ ಅವಧಿಯ ರಂಗ ಡಿಪ್ಲೊಮಾ ಕೋರ್ಸ್‌ಗೆ ರಂಗಾಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
18ರಿಂದ 30 ವರ್ಷ ವಯೋಮಿತಿಯ ಯುವಕ, ಯುವತಿಯರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ತಲಾ 20 ಯುವಕ, ಯುವತಿಯರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ತರಬೇತಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು. ಪದವೀಧರರಿಗೆ ಆದ್ಯತೆ ನೀಡಲಾಗುವುದು. ರಂಗಭೂಮಿಯಲ್ಲಿ ಆಸಕ್ತಿ ಇದ್ದು ವಿವಿಧ ರಂಗಚಟುವಟಿಕೆಯಲ್ಲಿ ಭಾಗಿಯಾಗಿರಬೇಕು. ತರಬೇತಿ, ಊಟ, ವಸತಿ ಸೌಲಭ್ಯ ಉಚಿತವಾಗಿರುತ್ತದೆ. ರಾಜ್ಯ, ರಾಷ್ಟ್ರಮಟ್ಟದ ರಂಗತಜ್ಞರು ತರಬೇತಿ ನೀಡಲಿದ್ದಾರೆ.
ಅರ್ಜಿಗಾಗಿ ಕಲಾಶಾಲೆಯ ವೆಬ್‌ಸೈಟ್; www.theatreschoolsanehalli.org ಸಂಪರ್ಕಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 25ರೊಳಗೆ ಪ್ರಾಚಾರ್ಯರು, ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ– 577515 ವಿಳಾಸಕ್ಕೆ ಕಳುಹಿಸಬೇಕು. ಜೂನ್ 27 ಹಾಗೂ 28ರಂದು ರಂಗಪ್ರಯೋಗ ಶಾಲೆ ಆವರಣದಲ್ಲಿ ಸಂದರ್ಶನ ನಡೆಯಲಿದೆ. ಮಾಹಿತಿಗೆ ಮೊ; 8861043553 ಅಥವಾ 9972007015 ಸಂಪರ್ಕಿಸಲು ಕಲಾಸಂಘದ ಕಾರ್ಯದರ್ಶಿ ಪರಮೇಶ್ವರಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.