ADVERTISEMENT

ಹೊಸದುರ್ಗ: ‘ಮಠಕ್ಕೆ ಸ್ಥಾನ ಮಾನ ಒದಗಿಸಿದ ಮಹಾ ಚೈತನ್ಯ’

ಸಾಣೇಹಳ್ಳಿಯಲ್ಲಿ ಪ್ರತ್ಯೇಕವಾಗಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 3:22 IST
Last Updated 25 ಸೆಪ್ಟೆಂಬರ್ 2022, 3:22 IST
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಗುರುಪಾದೇಶ್ವರ ಪ್ರೌಢಶಾಲಾ ಮ್ಕಕಳು ನೃತ್ಯ ಪ್ರದರ್ಶಿಸಿದರು.
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಗುರುಪಾದೇಶ್ವರ ಪ್ರೌಢಶಾಲಾ ಮ್ಕಕಳು ನೃತ್ಯ ಪ್ರದರ್ಶಿಸಿದರು.   

ಹೊಸದುರ್ಗ: ಕರ್ನಾಟಕದ ಮಠ ಪರಂಪರೆಯಲ್ಲಿ ಮಠಗಳಿಗೆ ತನ್ನದೇ ಆದ ಸ್ಥಾನಮಾನ ಸಿಗುವಂತೆ ಮಾಡಿದ ಮಹಾನ್‌ ಚೇತನ ಶಿವಕುಮಾರ ಶಿವಚಾರ್ಯ ಸ್ವಾಮೀಜಿ ಎಂದು ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶಿವಕುಮಾರ ಶಿವಚಾರ್ಯ ಸ್ವಾಮೀಜಿಯವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಸಾಣೇಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿವಕುಮಾರ ಸ್ವಾಮೀಜಿ ಅವರ ಮನದ್ದಿನಲ್ಲಿ ಪ್ರೀತಿಗೆ ಸ್ಥಾನವಿತ್ತೇ ಹೊರತು, ದ್ವೇಷಕ್ಕಲ್ಲ. ಎಂದೂ ಯಾರನ್ನೂ ಕೀಳಾಗಿ ನೋಡಲಿಲ್ಲ. ವ್ಯಕ್ತಿಯ ಪರಿವರ್ತನೆ ಗುರಿಯಾಗಿತ್ತು. ಒಳ್ಳೆಯ ಕೆಲಸ ಮಾಡಿದವರನ್ನುಪ್ರೋತ್ಸಾಹಿಸುತ್ತಿದ್ದರು. ಮೌಢ್ಯ,ಸ್ಥಾವರ, ದೇವಾಲಯ, ಪೂಜಾರಿ ಹಾಗೂ ಪುರೋಹಿತರ ಬಗ್ಗೆ ನಿರ್ಭಿಡೆಯಿಂದ ಬರೆಯುತ್ತಿದ್ದರು ಎಂದು ಸ್ಮರಿಸಿದರು.

ADVERTISEMENT

ಕವಿ ಚಂದ್ರಶೇಖರ್‌ ತಾಳ್ಯ ನುಡಿನಮನ ಸಲ್ಲಿಸಿದರು. ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಎಸ್.‌ಆರ್.‌ ಚಂದ್ರಶೇಖರಯ್ಯ, ಎ.ಸಿ. ಚಂದ್ರಣ್ಣ, ಅರಸೀಕೆರೆಯ ಜಿ.ವಿ. ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.